ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಸಂಘದ ಚುನಾವಣೆ: 28 ಮತಗಳು ತಿರಸ್ಕೃತ

Last Updated 16 ಡಿಸೆಂಬರ್ 2020, 13:43 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆಯಲ್ಲಿ 13 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 28 ಮತಗಳು ತಿರಸ್ಕೃತಗೊಂಡಿವೆ.

ಚಾಂದಪಾಶಾ (279), ಹನುಮಂತಪ್ಪ (274), ಎಂ.ಮಲ್ಲೇಶ (272), ಮಲ್ಲಿಕಾರ್ಜುನ ಹಟ್ಟಿ (232), ರುದ್ರಗೌಡ ಪಾಟೀಲ (294), ಶರಣಪ್ಪ ಹಕ್ಕಂಡಿ (315), ಶರಣೇಗೌಡ ಪೊ.ಪಾಟೀಲ (283), ವಿರೂಪಾಕ್ಷಪ್ಪ.ಎಂ (231), ಲತಾ ಎಸ್ (360), ಸುವರ್ಣ (340), ಶಾರದಮ್ಮ (317), ರಾಜಮ್ಮ‌ ಅವರು 293 ಮತ ಪಡೆದು ಆಯ್ಕೆಯಾಗಿದ್ದಾರೆ.

13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 32 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಿಗ್ಗೆ 7.30 ಕ್ಕೆ ಶುರುವಾದ ಮತದಾನ ಪ್ರಕ್ರಿಯೆಯಲ್ಲಿ ಶಿಕ್ಷಕರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ತುರುಸಿನಿಂದ ಮತದಾನ ಮಾಡಿದರು. 657 ಮತಗಳ ಪೈಕಿ 28 ಮತಗಳು ತಿರಸ್ಕೃತಗೊಂಡಿದ್ದು, 629 ಮತಗಳು ಮಾತ್ರ ಚಲಾವಣೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT