ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾವರಗೇರಾ | ಕಲ್ಲುಬಂಡೆಯಲ್ಲಿ ಗಂಟೆಯ ವಿಶೇಷ ನಾದ

Published : 9 ನವೆಂಬರ್ 2023, 16:36 IST
Last Updated : 9 ನವೆಂಬರ್ 2023, 16:36 IST
ಫಾಲೋ ಮಾಡಿ
Comments

ತಾವರಗೇರಾ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆವರಣದಲ್ಲಿ ಇರುವ ಕಲ್ಲುಬಂಡೆಗೆ ಸಣ್ಣ ಕಲ್ಲಿನಿಂದ ಬಾರಿಸಿದರೆ ಗಂಟೆ ಶಬ್ದ ಮತ್ತು ತಾಮ್ರದ ಪಾತ್ರೆಯ ಶಬ್ದ ಹೊರಬರುತ್ತಿರುವುದು ಗುರುವಾರ ಪತ್ತೆಯಾಗಿದೆ. 

ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಕಲ್ಲಿನಲ್ಲಿ ಬರುವಂತಹ ಶಬ್ದದಂತೆ ಇಲ್ಲಿ ಒಂದರ ಮೇಲೊಂದು ಇರುವ ಕಲ್ಲು ಬಂಡೆಯ ಮೇಲಿನ ಬೃಹತ್ ಬಂಡೆಯನ್ನು ಸಣ್ಣ ಕಲ್ಲಿನಿಂದ ಬಾರಿಸಿದಾಗ ಗಂಟೆ ಶಬ್ದ ಮತ್ತು ತಾಮ್ರದ ಪಾತ್ರೆ ಬಾರಿಸಿದಾಗ ಹೊರ ಬರುವ ಶಬ್ದವು ಬರುತ್ತಿದೆ. ಇದು ಜನರ ಕುತೂಹಲಕ್ಕೂ ಕಾರಣವಾಗಿದೆ.

ಬಂಡೆಯ ಒಂದು ಕೊನೆಯ ಭಾಗದಿಂದ ಕಲ್ಲು ಜಜ್ಜಿದರೆ ಅದೇ ಕಲ್ಲಿಗೆ ಎದುರಿಗೆ ನಿಂತು ಕಿವಿಯನ್ನು ಬಂಡೆಗೆ ಇಟ್ಟು ಕೇಳಿದರೆ ಇಂತಹ ಶಬ್ದ ಕೇಳಬಹುದಾಗಿದೆ. ಹೀಗೆ ವಿಶೇಷ ನಾದ ಹೊರಹೊಮ್ಮುವ ಕಲ್ಲನ್ನು ನೋಡಿ ಜನರು ಬಂದು ಶಬ್ದ ಕೇಳಿವುದು ಸಾಮಾನ್ಯವಾಗಿದೆ.

ಈ ಕುರಿತು ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಮಾಹಿತಿ ನೀಡಿ,‘ವಸತಿ ಶಾಲಾ ಆವರಣದಲ್ಲಿ ಕಲ್ಲುಬಂಡೆ ಇದ್ದು, ಕೆಲವು ತಿಂಗಳ ಹಿಂದೆ ಸ್ವಚ್ಛತೆ ಮತ್ತು ಕ್ರೀಡಾ ಚಟುವಟಿಕೆಗೆ ವಿದ್ಯಾರ್ಥಿಗಳು, ಶಿಕ್ಷಕರು ಈ ಕಲ್ಲುಬಂಡೆಯ ಶಬ್ಧ ಗಮನಿಸಿದಾಗ, ವಿಶೇಷ ಇರಬಹುದು ಎಂದು ಅದಕ್ಕೆ ಸುಣ್ಣ ಹಚ್ಚಿದೆ. ಆದರೆ ಇಂತಹ ನಾದ ಹೊರ ಹೊಮ್ಮುತ್ತಿರುವದು ಆಶ್ಚರ್ಯ ತಂದಿದೆ’ ಎಂದರು.

ಕಲ್ಲುಬಂಡೆಯನ್ನು ಪುರಾತತ್ವ ಇಲಾಖೆ ಮೂಲಕ ಬಂಡೆಯಿಂದ ಬರುವ ಶಬ್ಧದ ಕುರಿತು ಮಾಹಿತಿ ಸಂಗ್ರಹ ಮಾಡಿದರೆ, ಕಾರಣ ಏನೆಂಬುದು ತಿಳಿಯುವುದು ಎಂದು ಸ್ಥಳೀಯ ಕಸಾಪ ಹೋಬಳಿ ಘಟಕದ ಮಾಜಿ ಅಧ್ಯಕ್ಷ ಅಮರೇಶ ಗಲಗಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT