ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ರೈತನ ₹ 50 ಸಾವಿರ ಎಗರಿಸಿದ ಕಳ್ಳರು

ಕುಷ್ಟಗಿ ಬಸ್‌ನಿಲ್ದಾಣದಲ್ಲಿ ಕಿಸೆಗಳ್ಳರ ಹಾವಳಿ; ಏಕಕಾಲಕ್ಕೆ ಮೂವರ ಜೇಬಿಗೆ ಕತ್ತರಿ
Published : 28 ಆಗಸ್ಟ್ 2024, 15:35 IST
Last Updated : 28 ಆಗಸ್ಟ್ 2024, 15:35 IST
ಫಾಲೋ ಮಾಡಿ
Comments

ಕುಷ್ಟಗಿ: ಪಟ್ಟಣ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ನಿಲ್ದಾಣದಲ್ಲಿ ಕಿಸೆಗಳ್ಳರ ಹಾವಳಿ ಮಿತಿ ಮೀರಿದ್ದು ಅನೇಕ ಪ್ರಯಾಣಿಕರ ಬಹಳಷ್ಟು ಹಣವನ್ನು ಕಳ್ಳರು ಎಗರಿಸುವುದು ಇಲ್ಲಿ ಸಾಮಾನ್ಯವಾಗಿದೆ.

ಬುಧವಾರ ಒಂದೇ ಸಮಯದಲ್ಲಿ ಮೂವರು ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಅದರಲ್ಲಿ ಯಲಬುರ್ಗಾ ತಾಲ್ಲೂಕು ಹಿರೇಅರಳಿಹಳ್ಳಿ ಗ್ರಾಮದ ಶರಣಪ್ಪ ಭೂತಲ ಎಂಬ ರೈತನ ಜೇಬಿನಲ್ಲಿದ್ದ ₹ 50 ಸಾವಿರ ಹಣವನ್ನು ಲಪಟಾಯಿಸಿದ್ದಾರೆ. ಆಸ್ಪತ್ರೆ ಖರ್ಚಿಗೆ ಸಂಬಂಧಿಕರಿಗೆ ಹಣ ಕೊಂಡೊಯ್ಯಲು ಸಿಂಧನೂರು ಬಸ್‌ ಏರುವಾಗ ನೂಕುನುಗ್ಗಲಿನಲ್ಲಿ ರೈತ ಶರಣಪ್ಪ ಅವರ ಒಳ ಉಡುಪಿನ ಜೇಬು ಕತ್ತರಿಸಿ ಹಣ ಅಪಹರಿಸಿದ್ದಾರೆ. ಸಾಲ ಮಾಡಿ ಹಣ ತಂದ ಹಣ ಕಳ್ಳರ ಪಾಲಾಗಿದೆ ಎಂದು ರೈತ ಗೋಳು ತೋಡಿಕೊಂಡರು.

ಘಟನೆ ನಂತರ ಅನೇಕ ಜನರು ನಿಲ್ದಾಣದಲ್ಲಿದ್ದ ಸಾರಿಗೆ ಸಿಬ್ಬಂದಿ ವಿರುದ್ಧ ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಜನರ ಕಿಸೆಗಳ್ಳತನವಾಗಿದೆ. ದೂರು ಕೊಡಲು ಹೋದರೆ ಪ್ರಯೋಜನವಿಲ್ಲ ಎಂದು ಹಣ ಕಳೆದುಕೊಂಡವರು ಪೊಲೀಸ್‌ಠಾಣೆಗೆ ಹೋಗಿಲ್ಲ.

ನಂತರ ಸ್ಥಳಕ್ಕೆ ಬಂದ ಪೊಲೀಸರು ಹುಡುಕಾಟ ನಡೆಸಿದರಾದರೂ ಹಣ ದೋಚಿದವರು ಪತ್ತೆಯಾಗಿಲ್ಲ. ಈ ಕುರಿತು ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್ ಯಶವಂತ ಬಿಸನಳ್ಳಿ ತಿಳಿಸಿದರು.

ನಿಲ್ದಾಣದ ಸಿಸಿ ಕ್ಯಾಮೆರಾ ನಿಷ್ಕ್ರಿಯ: ಬಸ್‌ ನಿಲ್ದಾಣದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಆದರೆ ಹದಿನೈದು ದಿನಗಳ ಹಿಂದೆಯೇ ಎಲ್ಲ ಕ್ಯಾಮೆರಾಗಳು ನಿಷ್ಕ್ರಿಯಯಗೊಂಡಿವೆ. ಈ ವಿಷಯ ಗಮನಕ್ಕೆ ಬಂದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ಯಾಮೆರಾ ದುರಸ್ತಿಗೆ ಮುಂದಾಗಿಲ್ಲ ಎಂದು ಸ್ಥಳದಲ್ಲಿದ್ದ ಇತರೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ನಿಲ್ದಾಣದಲ್ಲಿದ್ದ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ದುರಸ್ತಿಗೆ ಪೊಲೀಸರು ಪದೇಪದೇ ಹೇಳಿದರೂ ಸಾರಿಗೆ ಸಂಸ್ಥೆ ನಿರ್ಲಕ್ಷ್ಯವಹಿಸಿದೆ ಎಂಬುದು ತಿಳಿಯಿತು.

ನಿಲ್ದಾಣದಲ್ಲಿ ಪೊಲೀಸರು ಕಾಟಾಚಾರಕ್ಕೆ ಬಂದು ಮೂಲೆಯಲ್ಲಿ ಮೊಬೈಲ್‌ ವೀಕ್ಷಿಸುತ್ತ ಕುಳಿತುಕೊಳ್ಳುತ್ತಾರೆ. ಪ್ರಯಾಣಿಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆರೋಪಿಸಿದರು. ಈ ಕುರಿತು ವಿವರಿಸಿದ ಘಟಕ ವ್ಯವಸ್ಥಾಪಕ ಸುಂದರಗೌಡ, ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಪಿಐ ಯಶವಂತ ಬಿಸನಳ್ಳಿ, ಐದು ನೂರಕ್ಕಿಂತ ಹೆಚ್ಚಿಗೆ ಜನಸೇರುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಸುಸ್ಥಿತಿಯಲ್ಲಿರಿಸುವ ನಿಯಮ ಕಡ್ಡಾಯ. ಈ ಬಗ್ಗೆ ಸಾರಿಗೆ ಸಂಸ್ಥೆಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT