ಗಂಗಾವತಿ: ತಾಲ್ಲೂಕಿನ ಸಾಣಾಪುರ ಫಾಲ್ಸ್ ಬಳಿಯ ತುಂಗಭದ್ರಾ ನದಿಯ ಪಾತ್ರದಲ್ಲಿ ಯುವಕರ ನಡುವೆ ಕಿತ್ತಾಟ ನಡೆದಿದ್ದು, ಯುವಕನೊಬ್ಬ ಕಲ್ಲು ಎತ್ತಿ ಯುವಕರ ಗುಂಪಿನ ನಡುವೆ ಬೀಸಾಡಿದ್ದಾನೆ.

ಬುಧವಾರ ಹೋಳಿಹಬ್ಬವನ್ನು ಸಂಭ್ರಮದಿಂದ ಆಡಿ ನದಿಪಾತ್ರಕ್ಕೆ ಬಂದಾಗ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಟೀ ಶರ್ಟ್ ಧರಿಸಿದ್ದ ಯುವಕನೊಬ್ಬ ಬರಿಮೈಲಿ ಇದ್ದ ಯವಕರ ಗುಂಪಿನ ಮೇಲೆ ಕಲ್ಲು ಎತ್ತಿ ಹಾಕಿರುವ ದೃಶ್ಯಾವಳಿಗಳ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡಿದೆ. ಬಳಿಕ ಎರಡೂ ಗುಂಪುಗಳ ಯುವಕರು ಹೊಡೆದಾಡಿಕೊಂಡಿದ್ದಾರೆ. ಕಲ್ಲು ಎತ್ತಿ ಹಾಕಿದ ಯುವಕ ತಕ್ಷಣವೇ ಅಲ್ಲಿಂದ ಓಡಿ ಹೋಗಿದ್ದು, ಹಿಡಿಯಲು ಪ್ರಯತ್ನಿಸಿದ ವಿವರ ವಿಡಿಯೊದಲ್ಲಿದೆ.

ಕಾಮಣ್ಣ ದಹನ; ಹಲವರಿಗೆ ಗಾಯ (ಕೊಪ್ಪಳ ವರದಿ): ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಹೋಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾಮಣ್ಣ ದಹನದ ವೇಳೆ ಬೆಂಕಿ ತಗುಲಿ ಹಲವರ ಕೈಗಳಿಗೆ ಸುಟ್ಟ ಗಾಯಗಳು ಆಗಿವೆ.

ಕಾಮಣ್ಣ ದಹಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದ ಸಂಘಟಕರು ಕೆಳಗಡೆ ಕರ್ಪೂರ ಇರಿಸಿ ಮೇಲೆ ಪೆಟ್ರೋಲ್ ಸುರಿದಿದ್ದರಿಂದ ಅದರ ಸಮೀಪದಲ್ಲಿಯೇ ನಿಂತಿದ್ದ ಕೆಲವರಿಗೆ ಬೆಂಕಿ ತಗುಲಿ ಗಾಯಗಳು ಆಗಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.