ಮುನಿರಾಬಾದ್ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದ 19ನೇ ಗೇಟ್ ಸಂಪೂರ್ಣ ಕೊಚ್ಚಿಹೋಗಿರುವ ಕಾರಣ ಹಂತಹಂತವಾಗಿ ಜಲಾಶಯದಿಂದ ನೀರು ಹೊರಗಡೆ ಬಿಡಲಾಗುತ್ತಿದೆ. ಆದರೂ ಜನ ಹುಚ್ಚಾಟ ಬಿಡದೆ ನೀರು ಹರಿಯುವ ಅಂಚಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ತಲ್ಲೀನರಾಗಿದ್ದರು.
ಪಂಪಾವನ ಮುಂಭಾಗ, ಎಡದಂಡೆ ಕಾಲುವೆ ಹರಿಯುವ ಸ್ಥಳ ಹೀಗೆ ವಿವಿಧೆಡೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಇದನ್ನೂ ಲೆಕ್ಕಿಸದೆ ಜನ ಪೋಟೊ ತೆಗದುಕೊಳ್ಳುತ್ತಿದ್ದಾರೆ.
ಅಪಾಯದ ಅಂಚಿನಲ್ಲಿ ನೀರಿನ ಬಳಿ ಹೋಗಬೇಡಿ ಎಂದು ಪೊಲೀಸರು ಹೇಳಿದರೂ ಜನ ಕೇಳುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಜನರನ್ನು ನಿಯಂತ್ರಣ ಮಾಡಲಾಗುತ್ತಿದೆ.