ಗುರುವಾರ , ಸೆಪ್ಟೆಂಬರ್ 19, 2019
24 °C
ತುಂಗಭದ್ರಾ ಅಣೆಕಟ್ಟೆ: ನಾಲ್ಕು ದಿನಗಳ ಕಾರ್ಯಾಚರಣೆ

ಸ್ಲೂಸ್‌ ಗೇಟ್‌ನಿಂದ ನೀರು ಸೋರಿಕೆ ತಡೆ

Published:
Updated:

ಕೊಪ್ಪಳ: ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಸ್ಲೂಸ್ ಗೇಟ್‌ನಿಂದ ನೀರು ಸೋರಿಕೆಯನ್ನು ತಡೆಗಟ್ಟಲಾಗಿದೆ.

ನಾಲ್ಕು ದಿನಗಳಿಂದ ಜಲಾಶಯದ ಎಂಜಿನಿಯರರು ಮತ್ತು ಖಾಸಗಿ ಕಾರ್ಖಾನೆಗಳ ತಜ್ಞರು ಹರಸಾಹಸಪಟ್ಟರೂ ನೀರು ಸೋರಿಕೆ ತಡೆಯಲು ಆಗಿರಲಿಲ್ಲ.

ಅಹಮದಾಬಾದ್‌ನ ತಜ್ಞರು ಮತ್ತು ಕೇಂದ್ರ ಜಲ ಆಯೋಗದ ಎಂಜಿನಿಯರರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು.

100 ಟನ್ ಸಾಮರ್ಥ್ಯದ ಮರಳಿನ ಚೀಲಗಳನ್ನು ಜಲಾಶಯದ ಒಳಗಿರುವ ಗೇಟ್‌ ಸ್ಥಳಕ್ಕೆ ವಿಶೇಷ ಕ್ರೇನ್‌ನ ನೆರವಿನಿಂದ ಇಳಿಸಿ ಬಂದ್ ಮಾಡಲಾಯಿತು. ನೈಲಾನ್ ಹಗ್ಗವನ್ನು ಜೋಳಿಗೆ ಆಕಾರದಲ್ಲಿ ಹೆಣೆದು ಅದರಲ್ಲಿ ಮರಳಿನ ಚೀಲಗಳನ್ನು ಅಡ್ಡಲಾಗಿ ಹಾಕಲಾಯಿತು. ಹರಿಯುವ ನೀರಿನ ಪ್ರಮಾಣ ಕಡಿಮೆಯಾಯಿತು.

ನೂರಾರು ಕಾರ್ಮಿಕರ ಶ್ರಮದಿಂದ ಕಾರ್ಯಾಚರಣೆ ಯಶಸ್ವಿಯಾಯಿತು.

Post Comments (+)