ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಎಂದೇ ಪ್ರಖ್ಯಾತಿ ಪಡೆದ ಆನೆಗೊಂದಿ ಗ್ರಾಮದಲ್ಲಿ ಚರಂಡಿ ನೀರು ಶುದ್ಧೀಕರಣ ವ್ಯವಸ್ಥೆಯಿಲ್ಲದ ಕಾರಣ, ಜನರು ಹರಿ ಬಿಡುವ ಕೊಳಚೆ ನೀರು ನೇರವಾಗಿ ತುಂಗಭದ್ರಾ ನದಿಗೆ ಸೇರುತ್ತಿದ್ದು,ಈ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿ ತಲುಪುತ್ತಿದೆ.

ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ತುಂಗಭದ್ರಾ ನದಿಯ ನೀರು ಹರಿದು ಬರುತ್ತಿದ್ದು, ಈ ನೀರನ್ನು ಈ ಹಿಂದೆ ಅಮೃತಕ್ಕೆ ಸಮಾನ ಎನ್ನಲಾಗುತ್ತಿತ್ತು. ಇದೀಗ ಜಲಾಶಯದಿಂದ ಕಂಪ್ಲಿ ಸೇತುವೆಯವರೆಗೆ ಈ ನೀರು ಕುಡಿದರೆ ರೋಗಗಳು ಬರುತ್ತವೆ ಎಂಬ ಸಂದೇಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ತುಂಗಭದ್ರಾ ನದಿ ನೀರಿನ ರಕ್ಷಣೆಗಾಗಿ ಪರಿಸರ ಪ್ರೇಮಿಗಳು, ಸಾಹಿತಿಗಳು ಕಳೆದ ಒಂದು ವರ್ಷದಿಂದ ನಿರ್ಮಲ ತುಂಗಭದ್ರಾ ಅಭಿಯಾನದಡಿ ನದಿಗೆ ಕಾರ್ಖಾನೆ ಮತ್ತು ಚರಂಡಿ ನೀರು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ ಜನ ಜಾಗೃತಿ ಮೂಡಿಸುತ್ತಾ, ಸಾರ್ವಜನಿಕ ಕಾರ್ಯಕ್ರಮಗಳು ನಡೆಸುತ್ತಾ ಬರುತ್ತಿದ್ದಾರೆ.

ಇಷ್ಟೆಲ್ಲಾ ಜನ ಜಾಗೃತಿ ಮೂಡಿಸುತ್ತಿದ್ದರೂ, ನದಿಗೆ ಚರಂಡಿ ನೀರು ಬಿಡುವುದು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಿರುವುದು ಕಡಿಮೆಯಾಗುತ್ತಿಲ್ಲ.

ಎಲ್ಲೆಲ್ಲಿ ಚರಂಡಿ ನೀರು ಹರಿಯುವುದು: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಎನ್ನುವ ಕಾರಣಕ್ಕೆ ಆನೆಗೊಂದಿ ಗ್ರಾಮ ವೀಕ್ಷಣೆಗೆ ದೇಶ-ವಿದೇಶಗಳಿಂದ ಇತಿಹಾಸಕಾರರು, ಪ್ರವಾಸಿಗರು ಆಗಮಿಸುತ್ತಾರೆ. ಇದರ ರಕ್ಷಣೆ ಹೊಣೆ ಹೊರಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು, ರಾಜವಂಶಸ್ಥರು, ಸಾರ್ವಜನಿಕರು ಕೈಕಟ್ಟಿ ಕುಳಿತಿದ್ದು, ಅಭಿವೃದ್ಧಿಗೆ ನಿರೀಕ್ಷೆ ಮಾಡದಂತಹ ಸ್ಥಿತಿಗೆ ತಲುಪಿದೆ.

ಹಾಗಾಗಿ ಗ್ರಾಮಸ್ಥರು ತಮ್ಮ ಮನೆಗಳ ಬಳಿ ಚರಂಡಿಗೆ ಬಿಡುವ ನೀರು, ಎಲ್ಲೆಡೆ ಸೇರಿ ಆನೆಗೊಂದಿ ಗ್ರಾಮದ 64 ಸಾಲಿನ ಕಲ್ಲಿನ ಮಂಟಪಕ್ಕೆ ತೆರಳುವ ರಸ್ತೆ ಬಳಿ, ತೋಟದ ಆಂಜನೇಯ ದೇವಸ್ಥಾನದ ಹಿಂಬದಿ, ಚಿಂತಾಮಣಿ ಸಮೀಪ, ತಳವಾರಗಟ್ಟದ ಬಳಿ ನೇರವಾಗಿ ನದಿಗೆ ಸೇರುತ್ತಿದೆ. ಈ ನೀರು ಮುಂದಿನ ಗ್ರಾಮದವರಿಗೆ ಕುಡಿಯಲು ಯೋಗ್ಯವಿಲ್ಲದಂತಾಗಿವೆ.

ಕಾರ್ಯನಿರ್ವಹಿಸದ ಎಲ್.ಡಬ್ಲ್ಯೂ.ಎಂ ಘಟಕ: ಆನೆಗೊಂದಿ ಗ್ರಾಮದಲ್ಲಿ ಮನೆಗಳ ತ್ಯಾಜ್ಯ ನೀರು, ಚರಂಡಿ ನೀರು ವೈಜ್ಞಾನಿಕವಾಗಿ ಶುದ್ಧೀಕರಿಸಿ, ನದಿಗೆ ಬಿಡಲು 2022- 23ನೇ ಸಾಲಿನಲ್ಲಿ ₹10ಲಕ್ಷ ಅನುದಾನದಲ್ಲಿ ಆಂಜನೇಯ ದೇವಸ್ಥಾನದ ಬಳಿ, 2025-26ನೇ ಸಾಲಿನಲ್ಲಿ ಚಿಂತಾಮಣಿ ಬಳಿ ₹4.90ಲಕ್ಷ ಬಳಸಿ ದ್ರವ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಿದ್ದರು. ಈ ಎರಡೂ ಘಟಕಗಳು ಸರಿಯಾಗಿ ನಿರ್ವಹಿಸುತ್ತಿಲ್ಲ.

ಆಂಜನೇಯನ ದೇವಸ್ಥಾನದ ಬಳಿ ದ್ರವ ತ್ಯಾಜ್ಯ ನಿರ್ವಹಣೆ ಘಟಕ ದುರಸ್ತಿಗೆ ಕಾದಿದೆ. ಈ ಬಗ್ಗೆ ಪಿಡಿಒ ಕ್ರಮ ಜರುಗಿಸುತ್ತಿಲ್ಲ. ಚಿಂತಾಮಣಿ ಬಳಿ ಘಟಕದ ಬಳಿ ಈಚೆಗೆ ಕಸ, ಗಿಡ-ಗಂಟಿಗಳು ತೆರವುಗೊಳಿಸಿದ್ದು, ಘಟಕ ಸರಿಯಾಗಿ ಕೆಲಸ ಮಾಡದ ಕಾರಣ, ಚರಂಡಿ ನೀರು ಶುದ್ಧಿಕರಣವೇ ಆಗುತ್ತಿಲ್ಲ.

ಶೌಚ ಮಾಡುವ ಸ್ಥಳವಾದ ಕೋಟೆ: ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನೆಗೊಂದಿ ತಳವಾರಗಟ್ಟದ ಬಳಿಯಿಂದ 64 ಸಾಲಿನ ಕಲ್ಲಿನ ಮಂಟಪದವರೆಗೆ ತುಂಗಭದ್ರಾ ನದಿಯ ದಡಕ್ಕೆ ಅಟಿಕೊಂಡು ಬೃಹತ್ ಕಲ್ಲುಗಳಿಂದ ಗೊಡೆ(ಕೋಟೆ) ನಿರ್ಮಿಸಿದ್ದು, ಇದು ಗ್ರಾಮಸ್ಥರ ಬಯಲು ಶೌಚದ ಸ್ಥಳವಾಗಿದೆ. ಹಾಗೇ ಪ್ರಮುಖ ಮಂಟಪ, ದೇವಸ್ಥಾನದ ಆಸು-ಪಾಸು ಸಹ ಶೌಚ ಮಾಡಲಾಗುತ್ತಿದೆ. ವೀಕ್ಷಣೆ ಬರುವ ಪ್ರವಾಸಿಗರು ದುರ್ವಾಸನೆಗೆ ಮೂಗು ಮುಚ್ಚಿಕೊಂಡು, ಅಧಿಕಾರಿಗಳನ್ನು ನಿಂದಿಸುತ್ತಾ, ಹೊರ ಬರುತ್ತಾರೆ ಎಂದು ಗ್ರಾಮಸ್ಥ ರಾಜು ಅಚ್ಚೊಳಿ ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-35-1979554888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.