ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ

ಯಲಬುರ್ಗಾ: ದೇಶಪ್ರೇಮ, ಶೌರ್ಯ ಸಾಹಸಕ್ಕೆ ಹೆಸರಾಗಿದ್ದ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹಾಲುಮತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವೀರನಗೌಡ ಪೊಲೀಸ್ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಹಕ್ಕಬುಕ್ಕರ ಭಾವಚಿತ್ರಕ್ಕೆ ವಿಶೇಷ ಗೌರವ ಸಲ್ಲಿಸಿ ನಂತರ ಮಾತನಾಡಿದ ಅವರು, ವಿಶೇಷ ವ್ಯಕ್ತಿತ್ವ, ದೇಶಭಕ್ತಿ, ನಿಷ್ಠೆ ಹಾಗೂ ಛಲಗಾರಿಕೆಯ ವ್ಯಕ್ತಿತ್ವ ವುಳ್ಳ ಹಕ್ಕಬುಕ್ಕರ ಬಗ್ಗೆ ಯುವಕರು ಹೆಚ್ಚಿನ ರೀತಿಯಲ್ಲಿ ತಿಳಿದುಕೊಳ್ಳಬೇಕಾಗಿದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶ ರಕ್ಷಣೆಗೆ ಬದ್ಧತೆ ತೋರಬೇಕಾಗಿದೆ ಎಂದರು.
ಮುಖಂಡ ಬಾಲಚಂದ್ರ ಸಾಲಭಾವಿ, ಡಾ.ಶಿವರಾಜ ಗುರಿಕಾರ ಮಾತನಾಡಿದರು. ಮುಖಂಡರಾದ ಗದ್ದೆಪ್ಪ ಚಿಲವಾಡಗಿ, ಪಪಂ ಸದಸ್ಯ ರೇವಣೆಪ್ಪ ಹಿರೇಕುರಬರ, ಹಾಲುಮತ ಮಹಸಭಾದ ಅಧ್ಯಕ್ಷ ಕೆ.ಆರ್.ಬೆಟಗೇರಿ, ದೊಡ್ಡಯ್ಯ ಗುರುವಿನ, ಹನುಮಂತಪ್ಪ ಲಗಳೂರು, ಮಹಾಂತೇಶ ಗಿಂಡಿ, ಮಂಜು ಹಳ್ಳಿಕೇರಿ, ಬಸವರಾಜ ಗಂಗಾವತಿ, ಪ್ರಕಾಶ ಮಾಲಿಪಾಟೀಲ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.