ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವರಗೇರಾ: ಹದಗೆಟ್ಟ ರಸ್ತೆ, ಪರದಾಟ

Last Updated 28 ಆಗಸ್ಟ್ 2020, 12:30 IST
ಅಕ್ಷರ ಗಾತ್ರ

ತಾವರಗೇರಾ: ಸಮೀಪದ ಲಿಂಗದಹಳ್ಳಿ ಗ್ರಾಮದಿಂದ ಹಡಗಲಿ ಮೂಲಕ ತಾವರಗೇರಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದೆ. ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಲಿಂಗದಹಳ್ಳಿ ಗ್ರಾಮದಿಂದ ಹಡಗಲಿ, ಸಿದ್ದಾಪೂರ, ಮೆಣೇಧಾಳ ಮಾರ್ಗವಾಗಿ ತಾವರಗೇರಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ 18-20 ಕಿ.ಮೀ ಇದೆ. ಪ್ರತಿನಿತ್ಯ ಎರಡೂ ಗ್ರಾಮಗಳ ನೂರಾರು ಜನ ಇದರ ಮೂಲಕವೇ ಪಟ್ಟಣಕ್ಕೆ ತೆರಳುತ್ತಾರೆ. ರಸ್ತೆ ಮೇಲೆ ಜೆಲ್ಲಿಕಲ್ಲು ತೇಲಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಸ್ತೆ ಸರಿ ಇಲ್ಲದ ಕಾರಣ 5-6 ಕಿ.ಮೀ ದೂರದ ವಿರೂಪಾಪುರ ಕ್ರಾಸ್ ಮಾರ್ಗವಾಗಿ ಸುತ್ತು ಹಾಕಿಕೊಂಡು ಪಟ್ಟಣಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸುತ್ತು ಹಾಕಿಕೊಂಡು ಹೋದರೆ ತಾವರಗೇರಾ ಪಟ್ಟಣ 25 ಕಿ.ಮೀ ದೂರವಾಗಲಿದೆ. ಆದ್ದರಿಂದ ಈ ರಸ್ತೆಗೆ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಲಿಂಗದಹಳ್ಳಿ ಗ್ರಾಮಸ್ಥರಾದ ಗ್ಯಾನೇಶ ಕಡಗದ್, ವಿರೇಶ, ಬಸವರಾಜ ಹಾಗೂ ಇಮಾಮಸಾಬ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT