ಮಂಗಳವಾರ, ಆಗಸ್ಟ್ 16, 2022
30 °C

'ಸಾಂತ್ವನ ಕೇಂದ್ರ ಮಹಿಳೆಯರ ತವರು ಮನೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಮಹಿಳಾ ಸಾಂತ್ವನ ಕೇಂದ್ರ ಮಹಿಳೆಯರ ಸಮಸ್ಯೆ ಪರಿಹಾರ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಮಹಿಳೆಯರ ಕೌಟುಂಬಿಕ, ಅತ್ಯಾಚಾರ, ಬಹುಪತ್ನಿತ್ವ, ವರದಕ್ಷಿಣೆ, ವಿಚ್ಛೇದನ ಹಾಗೂ ಇತರೆ ಪ್ರಕರಣಗಳು ದಾಖಲು ಮಾಡಿ ಸಂತ್ರಸ್ತ ಮಹಿಳೆಗೆ ಆಶ್ರಯ ಉಚಿತ ಕಾನೂನು ನೆರವು ನೀಡಿ ತವರು ಮನೆಯಂತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹೇಳಿದರು.

ಅವರು ನಗರದ ಅಂಬೇಡ್ಕರ್ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರೀಶಿಸಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸಾಂತ್ವನ ಯೋಜನೆ ಜಾರಿಗೊಳಿಸಿದ್ದು, ಈ ಕೇಂದ್ರವು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಸಕ್ತ ಸಾಲಿನಲ್ಲಿ ಸಾಂತ್ವನ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗುವಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನವಿ ಸಲ್ಲಿಸಲಾಗುವುದು ಎಂದರು.

ಉಪನಿರ್ದೇಶಕಿ ಅಕ್ಕಮಹಾದೇವಿ ಗಿರಡ್ದಿ, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ, ರೋಹಿಣಿ ಕೋಟಗಾರ, ಜಯಶ್ರೀ, ವಿರುಪಾಕ್ಷಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ, ಸದಸ್ಯೆ ಮಧುರಾ ಕರಣಂ, ಸಾಂತ್ವನ ಕೇಂದ್ರದ ಅಧ್ಯಕ್ಷ ಡಾ.ಬಿ.ಜ್ಞಾನಸುಂದರ, ಕಾರ್ಯದರ್ಶಿ ಬಿ.ಗಿರೀಶಾನಂದ, ಆಪ್ತ ಸಮಾಲೋಚಕಿ ಶಶಿಕಲಾಸ್ವಾಮಿ, ಸಮಾಜಸೇವಾ ಕಾರ್ಯಕರ್ತೆಯರಾದ ಗೀತಾ ಅಂಕಲಿ, ಭಾರತಿ ಸುಣಗಾರ, ವಿನೂತನ ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ಧಲಿಂಗಯ್ಯ ಹಿರೇಮಠ, ಪೋಲಿಸ್ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು