ಅಳವಂಡಿ: ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ, ಗೌರವದಿಂದ ಕೆಲಸ ಆಗಬೇಕು. ಮಹಿಳೆಯರಿಗೆ ಇರುವ ಹಕ್ಕುಗಳು ಹಾಗೂ ಕಾನೂನುಗಳು ಇನ್ನಷ್ಟು ಬಲಿಷ್ಠವಾಗಬೇಕು ಎಂದು ಸಮಾಜಶಾಸ್ತ್ರದ ವಿಭಾಗದ ಉಪನ್ಯಾಸಕಿ ಶಕುಂತಲಾ ಹೇಳಿದರು.

ಗ್ರಾಮದ ಶಿವಮೂರ್ತಿ ಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.

ಯಾವುದೇ ಒಂದು ಕುಟುಂಬ ಹಾಗೂ ದೇಶದ ಏಳಿಗೆಗೆ ಮಹಿಳೆಯರ ಪಾತ್ರ ತುಂಬಾ ಮುಖ್ಯ. ಪ್ರತಿಯೊಬ್ಬರು ಹೆಣ್ಣನ್ನು ಸಮಾನತೆಯಿಂದ ಕಾಣಬೇಕು. ಪ್ರತಿ ಹೆಣ್ಣಿನ ಯಶಸ್ಸಿನ ಹಿಂದೆ ಯಾರಾದರೂ ಒಬ್ಬರು ಪುರುಷ ಇರುತ್ತಾನೆ ಎಂದರು.

ಪ್ರಾಚಾರ್ಯ ನಾಗರಾಜ್ ಹಾವಿನಾಳ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ತನ್ನ ದಿನನಿತ್ಯದ ಕೆಲಸದ ಜೊತೆಗೆ ತನ್ನ ಜೀವನವನ್ನು ಕುಟುಂಬಕ್ಕಾಗಿ ಮೀಸಲಿಡುವ ಶಕ್ತಿ, ಶ್ರಮ, ಪ್ರೀತಿ, ಕಾಳಜಿ ಅದ್ಭುತವಾದದ್ದು, ಮಹಿಳೆಯನ್ನು ಪರಿಸರ, ಭೂಮಿ, ನದಿಗೆ ಹೋಲಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.

ಪ್ರಾಧ್ಯಾಪಕಿ ರೇಷ್ಮಾ ಮಾತನಾಡಿ, ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುತ್ತಾಳೆ. ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ ಆಕೆಯ ಸ್ಥೈರ್ಯದ ವಿವರಣೆಗೆ ಬೇರೆ ಪದಗಳೇ ಇಲ್ಲ. ಒಬ್ಬ ಪುರುಷ ಶಿಕ್ಷಣ ಪಡೆದರೇ ಒಬ್ಬ ವ್ಯಕ್ತಿ ಮಾತ್ರ ಶಿಕ್ಷಣ ಪಡೆದಂತೆ, ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬ ಶಿಕ್ಷಣ ಪಡೆಯುತ್ತದೆ ಎಂದರು.

ಪ್ರಾಧ್ಯಾಪಕರಾದ ಜಗದೀಶ ಆಲದಕಟ್ಟಿ, ಶಂಕ್ರಪ್ಪ, ಸಾಲಿಯಾಬೇಗಂ , ಹಂಪಾದೇವಿ, ಪ್ರವೀಣಕುಮಾರ, ಉಪನ್ಯಾಸಕರಾದ ವಿಜಯ ಕುಲಕರ್ಣಿ, ಬಸವರಾಜ ಸಸಿ, ಸುಮಯ್ಯ ಭಾಗವಾನ, ನಿಂಗಪ್ಪ, ಲಿಂಗರಾಜ, ಮಾರುತಿ, ಸಿಬ್ಬಂದಿಗಳಾದ ವೀರಣ್ಣ, ದುರಗಪ್ಪ, ಹನುಮಕ್ಕ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.