ಬುಧವಾರ, ನವೆಂಬರ್ 30, 2022
17 °C

ಕೊಪ್ಪಳ: ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಇಲ್ಲಿನ ಸಾಮರ್ಥ್ಯ ಸಂಸ್ಥೆ ಮತ್ತು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಹಭಾಗಿತ್ವದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ಈಚೆಗೆ ಜನಜಾಗೃತಿ ಜಾಥಾ ಜರುಗಿತು.

ಎಲುಬು ಕೀಲು ಮೂಳೆ ತಜ್ಞ ವಿಜಯ ಮಹಾಂತೇಶ ಸುಂಕದ ಅವರು ಜಾಥಾಕ್ಕೆ ಚಾಲನೆ ಕೊಟ್ಟರು. ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರಾರಂಭವಾದ ಜಾಥಾ ಅಶೋಕ ವೃತ್ತಕ್ಕೆ ಬಂದು ಕೊನೆಗೊಂಡಿತು.

ರಸ್ತೆ ನಿಯಮಗಳನ್ನು ಪಾಲಿಸಿ, ಕಟ್ಟಡ ನಿರ್ಮಾಣ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಿ ಮತ್ತು ಸುರಕ್ಷತಾ ಸಲಕರಣೆಗಳನ್ನು ಬಳಸುವ ಮೂಲಕ ಬೆನ್ನುಹುರಿ ಅಪಘಾತವಾಗುವುದನ್ನು ತಪ್ಪಿಸಿ ಎಂದು ಅರಿವು ಮೂಡಿಸಲಾಯಿತು. ಸರ್ಕಾರವು ಬೆನ್ನುಹುರಿ ಅಪಘಾತವುಳ್ಳ ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು. ಮುಖ್ಯವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಕಿಟ್ ದೊರೆಯಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಕಲಚೇತನರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ವಿತರಣೆ ಮಾಡಬೇಕು ಎಂದು ಸಂಘಟಕರು ಆಗ್ರಹಿಸಿದರು.

ಕೊಪ್ಪಳ ಇನ್ನರ್‌ ವೀಲ್‌ ಕ್ಲಬ್‌ ಕಾರ್ಯದರ್ಶಿ ಉಮಾ ತಂಬ್ರಳ್ಳಿ, ಸುಜಾತಾ ಪಟ್ಟಣಶೆಟ್ಟಿ, ಶರಣಮ್ಮ ಪಾಟೀಲ, ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಕೋಮಲಾ ಕುದರಿಮೋತಿ, ಸಾಮರ್ಥ್ಯ ಸಂಸ್ಥೆ ನಿರ್ದೇಶಕ ಬಿ.ಹಂಪಣ್ಣ, ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಎನ್. ಬಸಪ್ಪ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.