ಯಲಬುರ್ಗಾ: ಗ್ರಾಮದಲ್ಲಿ ಯುವ ಸಮೂಹ ಮದ್ಯವ್ಯಸನಕ್ಕೆ ದಾಸರಾಗುತ್ತಿರುವುದನ್ನು ತಡೆಯಲು ಗ್ರಾಮಸ್ಥರು ಸ್ವಾಮೀಜಿಯೊಬ್ಬರ ಮೊರೆಹೋಗಿ ಮದ್ಯ ಅಕ್ರಮ ಮಾರಾಟ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಹೌದು! ತಾಲ್ಲೂಕಿನ ಜಿ.ಜರಕುಂಟಿ ಗ್ರಾಮದಲ್ಲಿ ಅನೇಕ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಿರ್ಭಯವಾಗಿಯೇ ನಡೆಯುತ್ತಿದೆ. ಈ ಕುರಿತು ಪೊಲೀಸ್, ಅಬಕಾರಿ, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈಗ ಮದ್ಯ ಮುಕ್ತ ಗ್ರಾಮಕ್ಕಾಗಿ ಗ್ರಾಮಸ್ಥರು ಪಟತೊಟ್ಟಿದ್ದು ಈಗ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ದುಶ್ಚಟಗಳ ಜೋಳಿಗೆ ಅಭಿಯಾನ ಆರಂಭಿಸಿದ್ದಾರೆ.

ಯುವಕರು ಮದ್ಯ ಸೇವಿಸಿ ಮನೆಗೆ ಬಂದು ಜಗಳ ಮಾಡುವುದು, ಮನೆಯಲ್ಲಿನ ಸಾಮಗ್ರಿಗಳನ್ನು ಮಾರಾಟ ಮಾಡಿ ಮದ್ಯ ಸೇವನೆ ಮಾಡುವುದು, ವಿಪರೀತ ಮದ್ಯಪಾನ ಮಾಡಿ ರಸ್ತೆ ಬದಿಯಲ್ಲಿಯೇ ಮಲಗುವ ಘಟನೆಗಳು ಗ್ರಾಮದಲ್ಲಿ ನಡೆಯುತ್ತಲೇ ಇರುವುದರಿಂದ ಗಂಭೀರವಾಗಿ ಪರಿಗಣಿಸಲಾಯಿತು. ಸ್ವಾಮೀಜಿಯವರೊಂದಿಗೆ ಚರ್ಚಿಸಿ ನಿಯಂತ್ರಣಕ್ಕೆ ತರಲು ಅಭಿಯಾನ ಪ್ರಾರಂಭಿಸಲಾಗಿದೆ’ ಎಂದು ಮುಖಂಡರಾದ ಶರಣಗೌಡ ಮಾಲಿಪಾಟೀಲ್, ಮಹೇಶ ಜಕ್ಕಾರಿ ತಿಳಿಸಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸ್ವಾಮೀಜಿ ಅವರು ಗ್ರಾಮದ ವಿವಿಧ ದೇವಸ್ಥಾನದಲ್ಲಿ ಸಭೆ ಸೇರಿ ಜನರನ್ನು ಸೇರಿಸಿದ್ದಾರೆ. ದುಶ್ಚಟಗಳಿಂದ ಆಗುವ ವಿವಿಧ ರೀತಿಯ ನಷ್ಟದ ಬಗ್ಗೆ ಮನವರಿಕೆ ಮಾಡಿದ್ದಾರೆ. ಕುಟುಂಬಗಳು ಅನುಭವಿಸುವ ಯಾತನೆ ಹಾಗೂ ಆರ್ಥಿಕ ನಷ್ಟದ ಬಗ್ಗೆ ಅರಿವು ಮೂಡಿಸಿದ್ದಾರೆ.

ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಸಭೆಯಲ್ಲಿ ಕರೆಯಿಸಿ ‘ದೇವರ ಸಾಕ್ಷಿಯಾಗಿ ಇನ್ನು ಮುಂದೆ ಮದ್ಯ ಮಾರುವುದಿಲ್ಲ’ ಎಂದು ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಹಾಗೆಯೇ ಶ್ರೀಗಳ ಮಾತಿಗೆ ಸ್ಪಂದಿಸಿ ಶ್ರೀಗಳ ಪಾದಕ್ಕೆ ನಮಸ್ಕರಿಸಿ ಮಾರಾಟಗಾರರು ಪ್ರಮಾಣ ಮಾಡಿದ್ದಾರೆ’ ಎಂದು ಶರಣಯ್ಯ ಹಿರೇಮಠ ಹಾಗೂ ಶರಣಮ್ಮ ಹುಲ್ಲಣವರ ತಿಳಿಸಿದ್ದಾರೆ.

ಸಭೆಯಲ್ಲಿ ಮುಖಂಡರಾದ ಭೀಮನಗೌಡ, ಮಲ್ಲನಗೌಡ ಗೌಡ್ರ, ಶಿವನಗೌಡ ಗೌಡ್ರ, ಲಕ್ಷ್ಮವ್ವ ಗೌಡ್ರ, ಭರಮಮ್ಮ ಗೌಡ್ರಮ ದೇವಮ್ಮ, ಶಿವಮ್ಮ ಹುಲ್ಲನವರ, ದೇವಮ್ಮ ಗೌಡ್ರ, ಭೀಮವ್ವ ಬಿಸರನಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-35-2052407830

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.