ಯಲಬುರ್ಗಾ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಿರೇವಂಕಲಕುಂಟಾ ಶಾಖೆಯಲ್ಲಿ ವ್ಯವಸ್ಥಾಪಕರು ಸೇರಿದಂತೆ ಸಿಬ್ಬಂದಿ ಕೊರತೆಯಿದೆ. ಇದರಿಂದಾಗಿ ಗ್ರಾಹಕರು ನಿತ್ಯ ಸೇವೆಗಾಗಿ ಪರದಾಡುವಂತಾಗಿದೆ. ಸಣ್ಣ ವ್ಯವಹಾರಕ್ಕೂ ಇಡೀ ದಿನ ಬ್ಯಾಂಕ್ನಲ್ಲಿ ಕಾಯಬೇಕಾದ ಪರಿಸ್ಥಿತಿಯಿದೆ.

ಸುತ್ತಲಿನ ಹಲವು ಗ್ರಾಮಗಳಿಂದ ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಗ್ರಾಹಕರು ಬಂದು ಹೋಗುವವರಿಗೆ ನಿಗದಿತ ಸಮಯದಲ್ಲಿ ಕೆಲಸವಾಗುತ್ತಿಲ್ಲ. ಕೆಲವೊಂದು ಕೆಲಸವು 2–3 ದಿನಗಳವರೆಗೂ ಮುಂದುವರಿದಿರುವ ಉದಾಹರಣೆಗಳಿವೆ. ಗ್ರಾಮೀಣ ಜನರ ಬ್ಯಾಂಕಿಂಗ್ ಸೇವೆಗೆ ತೆರೆದ ಕೆಜಿಬಿ ಶಾಖೆಯು ಉತ್ತಮ ಸೇವೆ ಸಲ್ಲಿಸುತ್ತಿದೆ. ಆದರೆ ಸಿಬ್ಬಂದಿ ಕೊರತೆಯಿಂದ ತ್ವರಿತ ಸೇವೆ ಅಲಭ್ಯವಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಹಿರೇವಂಕಲಕುಂಟಾ ಭಾಗದಲ್ಲಿ ಇದೊಂದೇ ದೊಡ್ಡ ಬ್ಯಾಂಕ್ ಆಗಿದ್ದು, ಸುಮಾರು 35ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದೆ. ಬ್ಯಾಂಕ್ನಲ್ಲಿ ವ್ಯವಸ್ಥಾಪಕರಿಲ್ಲದೆ, ಗ್ರಾಹಕರಿಗೆ ಸಮರ್ಪಕವಾಗಿ ವಿವಿಧ ಸೇವೆಗಳು ದೊರೆಯುತ್ತಿಲ್ಲ. ಒಬ್ಬಿಬ್ಬರಿರುವ ಸಿಬ್ಬಂದಿಯೇ ಎಲ್ಲ ಕೆಲಸವನ್ನು ನಿರ್ವಹಿಸಬೇಕಾಗಿದೆ. ನೂರಾರು ಸಂಖ್ಯೆಯ ಗ್ರಾಹಕರಿಗೆ ಸೇವೆ ಒದಗಿಸುವಷ್ಟರಲ್ಲಿ ಸಮಯ ಮುಗಿದೇ ಹೋಗುತ್ತದೆ ಎಂದು ಗ್ರಾಹಕರಾದ ಶಿವರಾಜ ಸಜ್ಜನ, ಸುಜಾತ ಶ್ರೀಕಾಂತಗೌಡ ಮಾಲಿಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಹೊಂದಾಣಿಕೆ ಮಾಡಿಸುವುದು, ಕೆವೈಸಿ ಮಾಡಿಸಿಕೊಳ್ಳುವುದು, ಹಣ ಜಮೆ ಮಾಡುವುದು ಹಾಗೂ ಪಡೆಯುವುದು, ಡಿಡಿ ತೆಗೆದುಕೊಳ್ಳುವುದು, ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುವುದು, ಸಾಲಸೌಲಭ್ಯಕ್ಕಾಗಿ ವಿಚಾರಣೆ ಮತ್ತು ವ್ಯವಸ್ಥಾಪಕರೊಂದಿಗೆ ಚರ್ಚಿಸುವುದು ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಇವೇ ಮೊದಲಾದ ಯೋಜನೆಗಳ ನಿರ್ವಹಣೆಯು ಕೂಡ ಇದೇ ಬ್ಯಾಂಕ್ನ ಮೂಲಕವೇ ಆಗಬೇಕಾಗುವುದರಿಂದ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಆದರೆ ಕಡಿಮೆ ಸಿಬ್ಬಂದಿ ಇರುವುದರಿಂದ ಸಕಾಲದಲ್ಲಿ ಪರಿಣಾಮಕಾರಿ ಕೆಲಸವಾಗುತ್ತಿಲ್ಲ. ಕೆಲಸದ ಒತ್ತಡಕ್ಕೆ ಅನೇಕ ಗ್ರಾಹಕರು ನಾಳೆ ಮತ್ತು ನಾಡಿದ್ದು ಬನ್ನಿ ಎಂಬ ಉತ್ತರಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬ್ಯಾಂಕ್ನ ಮುಖ್ಯಸ್ಥರು ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಗ್ರಾಹಕರಾದ ಅಮರೇಗೌಡ್ರ ಮಾಲಿಪಾಟೀಲ, ಗಿರಿಜಾ ಹರ್ಲಾಪೂರ ಒತ್ತಾಯಿಸಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವ್ಯವಹಾರದ ಪ್ರಮಾಣಕ್ಕೆ ತಕ್ಕಂತೆ ಸೇವೆ ತ್ವರಿತವಾಗಬೇಕಾಗಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಹಣ ಪಡೆಯಲು ಬಂದ ಗ್ರಾಹಕರಿಗೆ ಬೇಡಿಕೆಗೆ ತಕ್ಕಂತೆ ಹಣ ಒದಗಿಸುವುದು, ಕೊರತೆ ಸಿಬ್ಬಂದಿ ನಿಯೋಜಿಸುವುದು, ಗಾಣದಾಳ ಅಥವಾ ತರಲಕಟ್ಟಿ ಗ್ರಾಮಗಳಲ್ಲಿ ವಿಸ್ತರಣಾ ಶಾಖೆಯನ್ನು ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಬ್ಯಾಂಕಿನ ಪ್ರವರ್ತಕರು ಹಾಗೂ ಮುಖ್ಯಸ್ಥರು ಗಮನ ಹರಿಸಬೇಕು ಎಂದು ಗ್ರಾಹಕರ ಒತ್ತಾಸೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-35-1912540632

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.