ಯಲಬುರ್ಗಾ: ತಾಲ್ಲೂಕಿನ ಕೋಳಿಹಾಳ ಗ್ರಾಮದಲ್ಲಿ 207ನೇ ಮಾಸಿಕ ಸಂಚಾರಿ ಶಿವಾನುಭವ ಕಾರ್ಯಕ್ರಮ ಹಾಗೂ ಮುದುಕಪ್ಪ ಇಂಗಳದಾಳ ಅವರ 19ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

ನೇತೃತ್ವವಹಿಸಿದ್ದ ಬಾದಾಮಿಯ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ‘ಹನ್ನೆರಡನೆಯ ಶತಮಾನದಲ್ಲಿ ಅಧ್ಯಾತ್ಮಿಕ, ವೈಚಾರಿಕತೆ ಹಾಗೂ ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ ಸಾಮಾಜಿಕ ಸುಧಾರಣೆಗೆ ಕ್ರಾಂತಿಗೆ ಮುಂದಾದ ಶರಣರಲ್ಲಿ ಬಸವಣ್ಣನವರು ಅಗ್ರಗಣ್ಯರು. ಅವರ ವಿಚಾರಗಳು ಹಾಗೂ ಧೋರಣೆಗಳು ಇಂದಿಗೂ ಕೊಟ್ಯಂತರ ಜನರ ಮನಸ್ಸಿನಲ್ಲಿ ಮನೆ ಮಾಡಿವೆ. ಆಚರಣೆಗೆ ಒಳಪಡುತ್ತಿವೆ’ ಎಂದರು.

ಶರಣ ದೇವಪ್ಪ ಖಾನಿಹಾಳ ಮಾತನಾಡಿ, ‘ಜೇವರ್ಗಿಯ ಷಣ್ಮುಖ ಶಿವಯೋಗಿಗಳ ಚಿಂತನೆಗಳು ಮತ್ತು ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಭಕ್ತಿ ಇದ್ದರೆ ಅದುವೇ ದೇವರಪೂಜೆಗೆ ಸಮಾನ, ಜೀವನದಲ್ಲಿ ಸತ್ಯ, ದಯೆ ಮತ್ತು ಕರುಣೆಯನ್ನು ರೂಢಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ’ ಎಂದರು.

ಈ ವೇಳೆ ಗಂಗಮ್ಮ ಕುರಕುಂದಿ, ನಿವೃತ್ತ ಉಪನ್ಯಾಸಕ ಟಿ. ಬಸವರಾಜ ಕುಷ್ಟಗಿ, ದೊಡ್ಡಬಸಯ್ಯ ಪೂರಾಣಿಕಮಠ, ಮಹಾದೇವಪ್ಪ ಚನ್ನಳ್ಳಿ, ಬಸವರಾಜ ತುರ್ವಿಹಾಳ, ಶರಣಪ್ಪ ಅಸಬಿ, ಹಂಪಣ್ಣ ತಾವರಗೇರಿ, ಬಸವರಾಜ ವರದಾಪುರ, ಸುಭಾಷ ಕೋರಿ, ಬಸವರಾಜಪ್ಪ ಇಂಗಳದಾಳ, ರುದ್ರಪ್ಪ ವರದಾಪುರ, ಅಮರೇಶಪ್ಪ ಬಳ್ಳಾರಿ, ಹನುಮಂತಪ್ಪ ಹುಣಶಿಹಾಳ, ಕುಷ್ಟಗಿ ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ರುದ್ರಪ್ಪ ಹಳ್ಳಿ ಸೇರಿ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-35-1032107613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.