ಯಲಬುರ್ಗಾ: ಅದು ಹೆಸರಿಗೆ ಮಾತ್ರ ಮನೆ, ಒಡೆದ ಸಿಮೆಂಟ್ ಶೀಟ್ಗಳ ಮುರುಕಲು ಛಾವಣಿ. ಮಳೆ ಬಂದರೆ ನೀರೆಲ್ಲ ಒಳಗೆ, ಮಲಗಲು ಅಲ್ಲ ಕುಳಿತುಕೊಳ್ಳುವುದಕ್ಕೂ ಅಂಗೈ ಅಗಲ ಜಾಗವಿಲ್ಲ. ಮುಚ್ಚುವುದಕ್ಕೆ ಬಾಗಿಲು ಇಲ್ಲ, ಸುತ್ತಲೂ ತೆರೆದುಕೊಂಡ ಗೋಡೆ.

ಇನ್ನು ಮನೆ ಸುತ್ತಲಿನ ಜಾಗ ಊರಿನ ಜನರ ಬಯಲು ಶೌಚಾಲಯ. ಇಡೀ ಊರಿನ ಕೊಳಚೆ ಬಂದು ನಿಲ್ಲುವುದು ಮನೆ ಮುಂದೆಯೇ. ಇಂಥ ಅಸಹನೀಯ ವಾತಾವರಣದಲ್ಲಿ ಬಡ ಮಹಿಳೆ ಚಿಕ್ಕ ಮಗನೊಂದಿಗೆ ಅಭದ್ರತೆಯ ನೆರಳಲ್ಲಿಯೇ ಬದುಕು ಸವೆಸುತ್ತಿದ್ದಾರೆ.

ತಾಲ್ಲೂಕಿನ ಹಿರೇಅರಳಳ್ಳಿ ಗ್ರಾಮದಲ್ಲಿ ಕಂಡುಬರುವ ದೃಶ್ಯವಿದು. ಪರಿಶಿಷ್ಟ ಜಾತಿಗೆ ಸೇರಿದ ಶಾಂತಮ್ಮ ಗಿಡ್ಡಹನುಮಪ್ಪ ಭಜಂತ್ರಿ ಈ ಮುರುಕಲು ಮನೆಯ ಒಡತಿ!. ಗೇಣು ಹೊಲ ಇಲ್ಲ, ತೀರಿಕೊಂಡ ಗಂಡ, ಚಿಕ್ಕ ಪುತ್ರನೊಂದಿಗೆ ವಾಸ. ನಿತ್ಯ ದುಡಿದರೆ ಊಟ. ಅನಾರೋಗ್ಯದಿಂದ ಮಲಗಿದರೆ ಹೊಟ್ಟೆಗೆ ಒದ್ದೆ ಬಟ್ಟೆ.

ಹೋಗಲಿ ಭದ್ರತೆಯ ನೆರಳಲ್ಲಿ ಕಾಲ ಕಳೆಯಬೇಕೆಂದರೆ ಅದರಿಂದಲೂ ವಂಚಿತ. ಮನೆಯ ಪಕ್ಕದಲ್ಲಿಯೇ ಗ್ರಾಮ ಪಂಚಾಯಿತಿ ಇದೆ. ಆದರೆ ಮಹಿಳೆಯ ಸ್ಥಿತಿಯ ಬಗ್ಗೆ ಯಾರೊಬ್ಬರಿಗೂ ಮರುಕ ಇಲ್ಲ. ಸರ್ಕಾರದ ವಸತಿ ಯೋಜನೆಗಳು ಈ ಬಡ ಮಹಿಳೆಯ ಪಾಲಿಗೆ ಇಲ್ಲದಿರುವುದು ದುರಂತದ ಸಂಗತಿ ಎನ್ನುತ್ತಾರೆ ಗ್ರಾಮಸ್ಥರು.

ಅಂಗಲಾಚಿದರೂ ಮನೆ ಮಂಜೂರಿಲ್ಲ: ಶಿಥಿಲಗೊಂಡ ಮನೆ ಯಾವಾಗ ಕುಸಿಯುತ್ತದೆಯೊ ಗೊತ್ತಿಲ್ಲ. ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದೆ ಶಾಂತಮ್ಮ ಕಂಡವರ ಬಳಿ ಅಂಗಲಾಚಿದ್ದಾರೆ. ಆದರೆ ವಸತಿ ರಹಿತ ಪಟ್ಟಿಯಲ್ಲಿ ಇವರ ಹೆಸರು ಇಲ್ಲ ಎಂದೆ ಪಂಚಾಯಿತಿಯವರ ಸಬೂಬು. ಆದರೆ ಇದೇ ಗ್ರಾಮದಲ್ಲಿನ ಕೆಲ ವ್ಯಕ್ತಿಗಳು ಮನೆ ಇದ್ದರೂ ಎರಡು ಮೂರು ಬಾರಿ ವಸತಿ ಯೋಜನೆ ಫಲಾನುಭವಿಗಳಾಗಿರುವ ಬಗ್ಗೆ ದೂರುಗಳಿವೆ. ಆದರೆ ದಯನೀಯ ಸ್ಥಿತಿಯಲ್ಲಿರುವ ಶಾಂತಮ್ಮಗೆ ಮಾತ್ರ ಅಂಥ ಭಾಗ್ಯ ಇಲ್ಲ ಎನ್ನಲಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-35-916359718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.