ಯಲಬುರ್ಗಾ: ‘ಸಮಾಜ ಸೇವೆಗೆ ಅಧಿಕಾರ ಬೇಕಿಲ್ಲ. ಪರೋಪಕಾರ, ದಾನ–ಧರ್ಮ ಕಾರ್ಯಕೈಗೊಳ್ಳಲು ಶ್ರೀಮಂತಿಕೆ ಬೇಕಿಲ್ಲ. ಮಾನವೀಯ ಗುಣ ಮತ್ತು ಮನುಷ್ಯತ್ವವಿದ್ದರೆ ಸಾಕು’ ಎಂದು ತಾ.ಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ತಾಲ್ಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಚ್ಚೀರೇಶ್ವರ ಜಾತ್ರೋತ್ಸವದ ಪ್ರಯುಕ್ತ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ಯುವಕ ಮಂಡಳ ಅವುಗಳ ಸಹಯೋಗದಲ್ಲಿ ದಿ.ಕಾಶೀನಾಥ ಕುಕನೂರು ಅವರ ಸ್ಮರಣಾರ್ಥ ಹಿರಿಯ ನಾಗರಿಕರ ಮತ್ತು ಅಂಗವಿಕಲರಿಗೆ ಉಚಿತ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದಲ್ಲಿ ಹಿರಿಯ ನಾಗರಿಕರ ಹಿತ ಕಾಪಾಡಲುವಲ್ಲಿ ಸ್ವಯಂ ಸೇವಾ ಸಂಸ್ಥೆಯವರು ಕೈಗೊಂಡ ಈ ಕಾರ್ಯ ಮಾದರಿಯಾಗಿದೆ’ ಎಂದು ಹೇಳಿದರು.

ವಿ.ಎಚ್.ತಳವಾರ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸಮಾಜ ಸೇವಕ ಟಿ.ರತ್ನಾಕರ ಮಾತನಾಡಿ, ‘ನಮ್ಮ ಸಂಸ್ಥೆ ವತಿಯಿಂದ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಕುಂತಲಾ ಪಾಟೀಲ, ಸಂಗಪ್ಪ ಬಂಡಿ ಸೇರಿ ಅನೇಕರು ಮಾತನಾಡಿದರು. ಮುಖಂಡರಾದ ವೀರಪ್ಪ ಪತ್ತಾರ, ಬಸವರಾಜ ಉಳ್ಳಾಗಡ್ಡಿ, ಶರಣಪ್ಪಗೌಡ ಪೊಲೀಸ್ ಪಾಟೀಲ, ಮುತ್ತಣ್ಣ, ಇಮಾಮ, ವೀರಣ್ಣ ಮಾನಶೆಟ್ಟಿ, ಗೌಡಪ್ಪ ಬಲಕುಂದಿ, ಮಂಜುನಾಥ ಉಳ್ಳಾಗಡ್ದಿ, ಕಳಕಪ್ಪ ರಾಟಿ, ವೀರಮ್ಮ ಕವಲೂರ, ವಿಜಯ ಕರೆಕುರಿ, ಉಮೇಶ ಕುಕನೂರ ದೇವಪ್ಪ ತೊಂಡಿಹಾಳ ಹಾಜರಿದ್ದರು.

ಗಣ್ಯರಾದ ಬಸವರಾಜ ಕುಕನೂರ ಅಧ್ಯಕ್ಷತೆ ವಹಿಸಿದ್ದರು. ವಿರೂಪಾಕ್ಷಪ್ಪ ಉಳ್ಳಾಗಡ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಖಿಲ್ ಗೊಂಗಡಶೆಟ್ಟಿ ಸ್ವಾಗತಿಸಿದರು. ಭೀಮಪ್ಪ ಹವಳಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-35-333389520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.