ಯಲಬುರ್ಗಾ: ‘ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ ಮುಖ್ಯ. ಪ್ರತಿ ವಿದ್ಯಾರ್ಥಿಯೂ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ’ ಎಂದು ಬೇವೂರು ಠಾಣೆ ಪಿಎಸ್ಐ ಟಿ.ಗುರುರಾಜ ಹೇಳಿದರು.

ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದ ಶಾಂತಾಬಾಯಿ ಅಡವಿರಾವ್ ಕುಲಕರ್ಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಘಟಕಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪದವಿ ಹಂತವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ತರ ಘಟ್ಟವಾಗಿದೆ. ವಿದ್ಯಾರ್ಥಿಗಳ ಗುರಿ ಸಾಧನೆಯೆಡೆಗೆ ಮುಖ ಮಾಡಬೇಕು. ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕು ನಡೆಸಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಮಾದರಿ ಜೀವನ ನಡೆಸಬೇಕು ಎಂದರು.

ಪ್ರಾಚಾರ್ಯ ಕೆ.ಎಚ್.ಛತ್ರದ ಮಾತನಾಡಿ, ಪದವಿ ನಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಒಲವು ತೋರಬೇಕು. ಬುದ್ಧಿವಂತಿಕೆ ಹಾಗೂ ಕೌಶಲವನ್ನು ಹೆಚ್ಚಿಸಿಕೊಂಡು ಜೀವನದ ದಾರಿಯಲ್ಲಿ ಸಾಗಬೇಕು ಎಂದರು.

ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಜೀವನ್ಸಾಬ್ ಬಿನ್ನಾಳ ಮಾತನಾಡಿ, ವಿದ್ಯಾರ್ಥಿಗಳು ಮೂಲ ಜನಪದ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಬೇಕು. ಜನಪದ ಸಾಹಿತ್ಯ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಸಿಡಿಸಿ ಉಪಾಧ್ಯಕ್ಷ ಕಾಶೀಂಅಲಿ ಗುಬ್ಬಿ, ಗಣ್ಯರಾದ ಮಂಜುನಾಥ ಸಜ್ಜನ್, ಹವಾಲ್ದಾರ್ ಮುತ್ತಪ್ಪ ನರಸಾಪುರ, ಗುರುರಾಜ ಕುಲಕರ್ಣಿ, ಚಂದ್ರಶೇಖರಯ್ಯ ಕಲ್ಯಾಣಮಠ, ರಾಘವೇಂದ್ರ ಜ್ಞಾನಮೋಟೆ, ಹನುಮೇಶ ಚಿಣಗಿ, ನಿರುಪಾದಿ ದಾಸರ್, ಬಸವರಾಜ ಸಜ್ಜನ್, ಹನುಮೇಶ ಭಜಂತ್ರಿ, ಬಸವರಾಜಯ್ಯ ಹಿರೇಮಠ, ವೀರೇಶ ಕಾಯಿ, ಹನುಮಂತಪ್ಪ ಮಡಿವಾಳರ, ಮಂಜುನಾಥ ಬಂಗಾರಿ, ಸಹಾಯಕ ಪ್ರಾಧ್ಯಾಪಕರಾದ ಉಮ್ರಾಜ್, ಮಹಾಂತೇಶ ಗೆದಗೇರಿ, ಪೂರ್ಣಿಮಾ, ಮಹಾಂತೇಶ ಡಿ., ವೀಣಾಕುಮಾರಿ, ಫರೀದಾಬೇಗಂ, ದೇವರಾಜ ಹುಲ್ಲೂರು, ಶರಣಬಸವ, ಮಲ್ಲೇಶ, ಪ್ರವೀಣ.ಎಂ., ಅತಿಥಿ ಉಪನ್ಯಾಸಕರಾದ ಡಾ.ಹನುಮಂತಪ್ಪ, ಡಾ.ರಾಧಿಕಾ, ತಾಹೇರ್ಬಾನು, ಗೀತಾ, ನಾಗಮ್ಮ, ಈರಪ್ಪ, ಯಮನವ್ವ, ಮೇಘರಾಜ, ಸಿಬ್ಬಂದಿ ಬಸವರಾಜ ಬೇವಿನಕಟ್ಟಿ, ರತ್ನಾ ಕೆಂಭಾವಿಮಠ, ನಾಗಪ್ಪ, ನಾರಾಯಣಪ್ಪ ಸೇರಿದಂತೆ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-35-1925303602

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.