ಯಲಬುರ್ಗಾ: ತಾಲ್ಲೂಕಿನ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ 893ನೇ ಬಸವ ಜಯಂತಿ ಆಚರಿಸಲಾಯಿತು.

ಮನಗುಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ‘ವಿಶ್ವಗುರು ಬಸವಣ್ಣನವರು ತಿಳಿಸಿಕೊಟ್ಟ ಪ್ರಮುಖ ಮೂರು ತತ್ವಗಳನ್ನು ಅರಿತುಕೊಂಡು ಅವುಗಳನ್ನು ಮೈಗೂಡಿಸಿಕೊಂಡರೆ ಶ್ರೇಷ್ಠರಲ್ಲಿ ಶ್ರೇಷ್ಠರಾಗಬಹುದು. ಸಮುದಾಯ ಸಂಘಟನೆಯಲ್ಲಿ ಈ ತತ್ವಗಳು ಈಗ ಅತ್ಯವಶ್ಯವಾಗಿವೆ. ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ ಮಹತ್ವದ ತತ್ವಗಳು’ ಎಂದು ಹೇಳಿದರು.

‘ಸಮಾಜದಲ್ಲಿ ಜಾತಿಪದ್ಧತಿ, ಲಿಂಗ ತಾರತಮ್ಯ, ಅಜ್ಞಾನ, ಮೌಢ್ಯ, ಭ್ರಷ್ಟಾಚಾರ, ವಂಚನೆ, ಸುಲಿಗೆ ಮೊದಲಾದ ದುರ್ಗುಣಗಳು ಮನುಷ್ಯನಲ್ಲಿ ತುಂಬಿ ತುಳುಕುತ್ತಿದೆ. ಅವುಗಳಿಂದ ಮುಕ್ತರಾಗದ ಹೊರತು ಸಮುದಾಯದಲ್ಲಿ ಸುಧಾರಣೆ ಆಗದು. ವೈಯಕ್ತಿಕವಾಗಿ ಸುಧಾರಣೆ ಕಂಡು ಕೊಳ್ಳುವ ಮೂಲಕ ನಾಡಿನಲ್ಲಿ ಆಗುವ ಬದಲಾವಣೆಯನ್ನು ನೋಡಬೇಕಾಗಿದೆ’ ಎಂದರು.

ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ದೇವಪ್ಪ ಕೋಳೂರು ಪ್ರಾಸ್ತಾವಿಕ ಮಾತನಾಡಿ, ‘ಬಸವ ಜಯಂತಿಯು ಎತ್ತುಗಳ ಮೆರವಣಿಗೆಯಲ್ಲ. ಬಸವೇಶ್ವರರ ಆಚರಣೆಯಾಗಿದೆ. ಬಸವಣ್ಣನವರ ಆಚಾರ ವಿಚಾರಗಳು ಅನುಕರಣೆಗೆ ಮುಂದಾಗುವ ಕೆಲಸ ಆಗಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಸವರಾಜಪ್ಪ ಇಂಗಳದಾಳ ಮಾತನಾಡಿ, ‘ಶರಣರು ವಚನಸಾಹಿತ್ಯದ ಮೂಲಕ ಜೀವನ ಮೌಲ್ಯ ಮತ್ತು ಅಚರಣೆಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಷಟಸ್ಥಲ ಧ್ವಜಾರೋಹಣವನ್ನು ತಾ.ಪಂ ಮಾಜಿ ಸದಸ್ಯ ಶರಣ ರುದ್ರಪ್ಪ ಮರಕಟ್ ನೆರವೇರಿಸಿದರು.

ಬಸವನಗೌಡ ಪೊಲೀಸಪಾಟೀಲ, ಹನಮಂತಪ್ಪ ದಳಪತಿ, ಮಹಾದೇವಪ್ಪ ಚನ್ನಳ್ಳಿ, ಅಮರೇಶಪ್ಪ ಗಡಿಹಳ್ಳಿ, ಕೃಷ್ಣ ಪತ್ತಾರ, ಹನಮಗೌಡ ಗೌಡ್ರ ಮಾತನಾಡಿದರು. ಗಣ್ಯರಾದ ಬಸವರಾಜ ಹೂಗಾರ, ಶರಣಪ್ಪ ಹೊಸಳ್ಳಿ, ಗಿರಿಮಲ್ಲಪ್ಪ, ಚಿದಾನಂದಗೌಡ ಗೊಂದಿ, ನಿಂಗಪ್ಪ ಪರಂಗಿ, ವಿರೂಪಾಕ್ಷಪ್ಪ ಮೇಟಿ, ಪರಮೇಶ್ವರ ಉಚ್ಚಲಕುಂಟಿ, ಹನಮಂತಪ್ಪ, ಹನಮಂತಪ್ಪ ಹೊರಪೇಟಿ, ಭೀಮನಗೌಡ ಗೌಡ್ರ, ಮಹಾಂತಗೌಡ, ಅಮರೇಶ ನಿಡಶೇಸಿ, ಶರಣಪ್ಪ ಗೊಂದಿ, ಯಲ್ಲಪ್ಪ ಅತ್ತಿಗುಡ್ಡದ, ಸಾವಿತ್ರಮ್ಮ ಆವಾರಿ, ಬಸಮ್ಮ ಹೂಗಾರ ಸೇರಿ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-35-777421952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.