ಯಲಬುರ್ಗಾ: ತಾಲ್ಲೂಕಿನ ತಿಪ್ಪನಾಳ ಸೀಮೆಯಲ್ಲಿ ಈಚೆಗೆ ನಿರ್ಮಾಣಗೊಂಡಿದ್ದ ಗಾಳಿ ವಿದ್ಯುತ್ ಉತ್ಪಾದನಾ ಘಟಕ ಕುಸಿದು ಬಿದ್ದಿದೆ. ಇದರಿಂದ ಅಪಾರ ನಷ್ಟವಾಗಿದ್ದು, ಪ್ರಾಣಹಾನಿಯಾಗಿಲ್ಲ. ಆದರೆ ಘಟಕ ಉರುಳಿರುವ ರಭಸಕ್ಕೆ ತಂತಿಗಳ ಪರಸ್ಪರ ಸ್ಪರ್ಷದಿಂದ ಕಾಗಿಕೊಳ್ಳ ಗುಡ್ಡದಲ್ಲಿರುವ ಕೆಲವು ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.

ತಿಪ್ಪನಾಳ ಗ್ರಾಮದ ಕಾಮಣ್ಣ ಹೊಸ್ಮನಿ ಎಂಬವರ ಜಮೀನಿನಲ್ಲಿ ಮೂರು ತಿಂಗಳ ಹಿಂದಷ್ಟೇ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಯವರು ನಿರ್ಮಿಸಿ ವಿದ್ಯುತ್ ಉತ್ಪಾದನೆ ಆರಂಭಿಸಿದ್ದರು. ಆದರೆ ಶುಕ್ರವಾರ ತಡರಾತ್ರಿಯಲ್ಲಿ ದಿಢೀರ್ ಸಂಪೂರ್ಣ ನೆಲಕ್ಕುರುಳಿದ್ದು, ಹೊಂದಿಸಿದ್ದ ರೆಕ್ಕೆಗಳು, ಕಬ್ಬಿಣದ ಸಲಾಕೆಗಳು, ಪಿಲ್ಲರ್ಗಳು ಮುರಿದಿವೆ. ಪರಿಣಾಮವಾಗಿ ಪಕ್ಕದಲ್ಲಿದ್ದ ಕಾಗಿಕೊಳ್ಳ ಎಂಬ ಅರಣ್ಯ ಪ್ರದೇಶದ ಹಲವು ಕಡೆ ವಿದ್ಯುತ್ ಸ್ಪರ್ಶದಿಂದ ಗಿಡಗಂಟಿಗಳು, ಮೇವು ಬೆಂಕಿಗೆ ಆಹುತಿಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ತನಿಖೆಗೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ವಾಸ್ತವಾಂಶವನ್ನು ಪರಿಶೀಲಿಸಿದ್ದಾರೆ.

ವಿದ್ಯುತ್ ಕಂಬ ಅಳವಡಿಸಿದ ನಂತರ ಜಮೀನು ಕೊಟ್ಟ ರೈತರು ಕೃಷಿ ಚಟುವಟಿಕೆ ಮಾಡಬಹುದು ಎಂದು ಖಾಸಗಿ ಕಂಪನಿಯರು ರೈತರಿಗೆ ಹೇಳುತ್ತಾರೆ. ಅವರ ಮಾತಿನಂತೆ ರೈತರು ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ. ಕುರಿಗಾಹಿಗಳು, ದನಕರುಗಳನ್ನು ಮೇಯಿಸುತ್ತಿರುತ್ತಾರೆ. ಕಂಬದ ಸುತ್ತಮುತ್ತಲೂ ಸುಳಿದಾಡುತ್ತಿರುತ್ತಾರೆ. ಹಗಲು ಹೊತ್ತಿನಲ್ಲಿ ಜನರಿದ್ದಾಗ ಅನಾಹುತ ಸಂಭವಿಸಿದ್ದರೆ ಪ್ರಾಣ ಹಾನಿಯಾಗುವ ಸಾಧ್ಯತೆಯಿತ್ತು. ರಾತ್ರಿ ಸಮಯವಾಗಿದ್ದರಿಂದ ಕಂಬದ ಬಳಿ ಜನರಾಗಲಿ ಜಾನುವಾರಾಗಲಿ ಇರಲಿಲ್ಲ. ಹೀಗಾಗಿ ಪ್ರಾಣಹಾನಿಯಾಗಿಲ್ಲ ಎಂದು ರೈತ ಮುಖಂಡ ಶ್ರೀಕಾಂತಗೌಡ ತರಲಕಟ್ಟಿ ತಿಳಿಸಿದ್ದಾರೆ.

ರೈತರ ಜಮೀನಿನಲ್ಲಿ ಕಳಪೆ ಟವರ್ ನಿರ್ಮಿಸಿ, ಕೈ ತೊಳೆದುಕೊಂಡಿರುವ ಖಾಸಗಿ ಕಂಪನಿಯವರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ನಿರ್ಮಾಣದ ಹಂತದಲ್ಲಿ ಹೊಲದ ಮಾಲೀಕರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ದಬ್ಬಾಳಿಕೆ ನಡೆಸುವ ಕಂಪನಿಯವರು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ. ಶಾಸಕರ ನಿರ್ಲಕ್ಷ್ಯ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವೈಫಲ್ಯ ಅನಾಹುತಕ್ಕೆ ಕಾರಣ ಎನ್ನಬಹುದು. ತಾಲ್ಲೂಕಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುತೇಕ ಟವರ್ಗಳು ನಿಯಮಬಾಹಿರವಾಗಿವೆ. ಕಂಪನಿಗಳು ನಿಯಮಗಳನ್ನು ಪಾಲಿಸುತ್ತಿಲ್ಲ. ಮುಖ್ಯವಾಗಿ ನೋಂದಣಿಯಲ್ಲಿಯೇ ಲೋಪವಾಗುತ್ತಿದೆ. ರೈತರ ಹಿತ ಬದಿಗೊತ್ತಿ ಖಾಸಗಿ ಕಂಪನಿಗಳ ಪರವಾಗಿ ನಿಂತಿರುವ ಶಾಸಕರು ಮತ್ತು ಅಧಿಕಾರಿಗಳು ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದರಿಂದ ಹೇಳುವವರು ಕೇಳುವವರು ಇಲ್ಲದಂತಾಗಿದೆ. ತಾಲ್ಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳು ತಲೆ ಎತ್ತಿದ್ದು, ಯಾವ ಹಂತದಲ್ಲಿ ಯಾವ ರೀತಿ ಅನಾಹುತಕ್ಕೆ ಎಡೆಮಾಡಿಕೊಡುತ್ತವೆಯೋ ಗೊತ್ತಿಲ್ಲ. ರೈತರಲ್ಲಿ ಈಗ ಆತಂಕ ಶುರುವಾಗಿದೆ. ಸದ್ಯ ತಿಪ್ಪನಾಳ ಘಟನೆಯು ಒಂದು ಎಚ್ಚರಿಕೆ ಗಂಟೆಯಾಗಿದ್ದು, ಈಗಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟ ಮತ್ತು ನಿಯಂತ್ರಣಕ್ಕೆ ಮುಂದಾಗಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ್ರ ಕೋನನಗೌಡ್ರ ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-35-956892915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.