ಯಲಬುರ್ಗಾ: ಪಟ್ಟಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹಿರಿಯ ಶ್ರೇಣಿ ನ್ಯಾಯಾಧೀಶ ಜೆ. ರಂಗಸ್ವಾಮಿ ಮಾತನಾಡಿ, ‘ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ನಿರೀಕ್ಷೆಗೂ ಮೀರಿ ಸಾಧಿಸಿ ಸುವ ಮೂಲಕ ಪುರುಷರಷ್ಟೇ ಸಮಾನರು ಎಂದು ಸಾಬೀತು ಪಡಿಸಿದ್ದಾರೆ. ಸರ್ಕಾರವು ಮಹಿಳೆಯರ ಸಾಮರ್ಥ್ಯ ಮತ್ತು ಜಾಣತನ ಗಮನಿಸಿ ಪ್ರತಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿಕೊಡುವ ಮೂಲಕ ಮಹಿಳೆಯನ್ನು ಅಭಿವೃದ್ಧಿಗೊಳಿಸಲು ಮುಂದಾಗಿದೆ. ವಿವಿಧ ಕಾಯ್ದೆ ಅಡಿಯಲ್ಲಿ ಹಲವು ಯೋಜನೆಗಳು ಮಹಿಳೆಯರ ಅಭ್ಯುದಯಕ್ಕೆ ಬೆಂಬಲಿಸುತ್ತಿವೆ. ಕಾನೂನಿನ ಪ್ರೋತ್ಸಾಹ ದೊರೆಯುತ್ತಿದೆ’ ಎಂದರು.

ತಾ.ಪಂ ಇಒ ನೀಲಗಂಗಮ್ಮ ಬಿ. ಮಾತನಾಡಿ, ಮಹಿಳೆಯರಿಗೆ ಅನುಕಂಪ ಬೇಕಿಲ್ಲ, ಅವಕಾಶ ಬೇಕಾಗಿದೆ. ಈಗಾಗಲೇ ಪ್ರತಿಯೊಂದು ರಂಗದಲ್ಲಿ ಗಮನಾರ್ಹ ಛಾಪು ಮೂಡಿಸಿ ಸೈ ಎನಿಸಿಕೊಂಡಿರುವ ಮಹಿಳೆಯರಿಗೆ ಪುರುಷರಂತೆಯೇ ಸರ್ವ ರಂಗದಲ್ಲಿಯೂ ಸಮಾನ ರೀತಿಯಲ್ಲಿಯೇ ಕಾಣಬೇಕು ಹಾಗೂ ಸೌಲಭ್ಯಗಳು ದೊರೆಯಬೇಕಾಗಿದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಅಸೂಟಿ ಮಾತನಾಡಿ, ಸಾಕಷ್ಟು ಕಾನೂನಿನ ಬೆಂಬಲ ಇದ್ದರೂ ಕೂಡಾ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಅನೇಕ ವಿದ್ಯಾವಂತರಿಂದಲೇ ಮಹಿಳೆಯರ ಮೇಲಿನ ದಬ್ಬಾಳಿಕೆ, ಅತ್ಯಾಚಾರ ಹಾಗೂ ಶೋಷಣೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ’ ಎಂದು ಹೇಳಿದರು.

ಹಿರಿಯ ವಕೀಲೆ ಅಕ್ಕಮಹಾದೇವಿ ಪಾಟೀಲ, ತಾಲ್ಲೂಕು ವೈದ್ಯಾಧಿಕಾರಿ ನೇತ್ರಾವತಿ ಹಿರೇಮಠ ಸೇರಿ ಅನೇಕರು ಮಾತನಾಡಿದರು. ಇದೇ ವೇಳೆ ಅನೇಕ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಿರಿಯ ವಕೀಲ ಎಂ.ಎಸ್. ನಾಯ್ಕರ, ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ಮೇಲ್ವಿಚಾರಕಿ ಲಲಿತಾ ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪ್ರಕಾಶ ನಾಶಿ, ಎ.ಎಂ.ಪಾಟೀಲ, ಇಂದಿರಾ ಉಳ್ಳಾಗಡ್ಡಿ, ಮಹೇಶ್ವರಿ ಸಾವಳಗಿಮಠ, ಜಯಲಕ್ಷ್ಮಿ ಮೆಣಸಿನಕಾಯಿ, ಚನ್ಮಮ್ಮ ಶಾನ ಭೋಗರ, ಮಾಧವಿ ವೈದ್ಯ, ಮಂಜುಳಾ ಗುಗ್ಗರಿ, ಶಿವಪುತ್ರಮ್ಮ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-35-1514864135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.