ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಶಸ್ವಿನಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ’

Published 2 ಜುಲೈ 2023, 14:38 IST
Last Updated 2 ಜುಲೈ 2023, 14:38 IST
ಅಕ್ಷರ ಗಾತ್ರ

ಅಳವಂಡಿ: ಸಮಾಜದಲ್ಲಿ ರೈತರು ಹಾಗೂ ಬಡ ಕಟುಂಬಗಳು ಸಂಕಷ್ಟದಲ್ಲಿವೆ. ಇಂತಹ ಜನರ ಆರೋಗ್ಯ ಸುಧಾರಣೆಗೆ ಯಶಸ್ವಿನಿ ಯೋಜನೆ ಸಹಕಾರಿಯಾಗಿದೆ. ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಂದಾನಪ್ಪ ಡಂಬಳ ಹೇಳಿದರು.

ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಯಶಸ್ವಿನಿ ಆರೋಗ್ಯ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ ವಿತರಿಸಿ ಮಾತನಾಡಿದರು.

ಆಕಸ್ಮಿಕವಾಗಿ ಕಾಯಿಲೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಲು ಈ ಕಾರ್ಡ್‌ ಅನೂಕೂಲಕರವಾಗಲಿದೆ. ಉಚಿತ ಆರೋಗ್ಯ ಸೇವೆ ಪಡೆಯಲು ಅನೂಕೂಲ ಆಗಿದೆ. ಕಾರ್ಡನ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರಕಾಶ ಹಳ್ಳಿಗುಡಿ, ರಾಚಯ್ಯ ಕೇಲೂರಮಠ, ಅಂದಪ್ಪ ಡಂಬಳ, ರೇಣವ್ವ, ಶಿವನಗೌಡ ಅಲ್ಲಿಪೂರ, ಉಮೇಶ ಡಂಬಳ, ಸುರೇಶ, ಬಸಪ್ಪ, ಪಾರವ್ವ ಗಿರಡ್ಡಿ, ಲಕ್ಷ್ಮವ್ವ, ಮಾರುತಿ, ಬಸವರಾಜ, ವೀರಣ್ಣ, ಸಂಘದ ಸಿಇಒ ಕಿರಣ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT