ಯಲಬುರ್ಗಾ: ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಿಜಿಪೇ-ಎಟಿಎಂ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು.

ಚಾಲನೆ ನೀಡಿದ ಜ್ಞಾನಪೀಠ ಗ್ರಾಮೀಣಾಭಿವೃದ್ಧಿ ಜನಸೇವಾ ಸಂಸ್ಥೆಯ ಸದಸ್ಯ ಶರಣಬಸಪ್ಪ ದಾನಕೈ ಮಾತನಾಡಿ, ‘ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಪ್ರದೇಶಾಭಿವೃದ್ಧಿ ಜೊತೆಗೆ ಜನ ಸಮುದಾಯಗಳ ಅಭಿವೃದ್ಧಿಗೂ ಶ್ರಮಿಸುತ್ತಿರುವ ಧರ್ಮಸ್ಥಳ ಸಂಸ್ಥೆಯು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ.

ಈಗ ಡಿಜಿಪೇ-ಎಟಿಎಂ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಗ್ರಾಹಕರಿಗೆ ಹಣಕಾಸಿನ ಸೇವೆ ಒದಗಿಸಲು ಮುಂದಾಗಿದೆ. ಇದಕ್ಕಾಗಿ ಯಾವುದೇ ಶುಲ್ಕ ಪಡೆಯದೇ ಸೇವೆ ಒದಗಿಸುತ್ತಿದೆ. ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ಪಡೆಯಬಹುದು, ಒಂದು ಬಾರಿ ಕನಿಷ್ಠ ₹10 ಸಾವಿರದವರೆಗೆ ಹಣ ಪಡೆಯಬಹುದಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಕಾವ್ಯಶ್ರೀ, ನೋಡಲ್ ಅಧಿಕಾರಿ ವಿಶಾಲ, ಕೃಷಿ ಅಧಿಕಾರಿ ಪ್ರಸನ್ನಕುಮಾರ, ಪ್ರಬಂಧಕ ಗಿರೀಶ, ಸಿಎಸ್ಸಿ ಕೇಂದ್ರದ ನಾಗಪ್ಪ, ಪ್ರೇಮಾ, ಶಕುಂತಲಾ ನೆಲಗಿ, ವಿದ್ಯಾ ಬಂಡಿಹಾಳ, ಸೇವಾ ಪ್ರತಿನಿಧಿ ಮಲ್ಲಮ್ಮ ಸೇರಿ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-35-2032030399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.