ಶುಕ್ರವಾರ, ಜನವರಿ 24, 2020
16 °C

ಕೆರೆಹಳ್ಳಿ: ಅಪಘಾತದಲ್ಲಿ ಯುವರೈತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುನಿರಾಬಾದ್: ಸಮೀಪದ ಕೆರೆಹಳ್ಳಿ ಬಳಿ ಭತ್ತದ ಹುಲ್ಲು ತುಂಬಿದ್ದ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದ ಯುವರೈತ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಗುಡದಳ್ಳಿ ಗ್ರಾಮದ ಮಂಜುನಾಥ ಅಶೋಕಪ್ಪ ಬೆಣ್ಣಿ(22) ಮೃತ ರೈತ. ಭತ್ತದ ಹುಲ್ಲು ತುಂಬಲು ಪಕ್ಕದ ಕೆರೆಹಳ್ಳಿಗೆ

ಹೋಗಿದ್ದ ಟ್ರ್ಯಾಕ್ಟರ್‌ ಮುಂಭಾಗದಲ್ಲಿ ಚಾಲಕನ ಪಕ್ಕದಲ್ಲಿ ಮಂಜುನಾಥ ಕುಳಿತಿದ್ದರು. ತಮಿಳುನಾಡು ನೋಂದಣಿಯ ಸರಕುಸಾಗಣೆ ಲಾರಿಯೊಂದು ಟ್ರ್ಯಾಕ್ಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕೆಳಕ್ಕೆ ಬಿದ್ದ ಮಂಜುನಾಥ ತೀವ್ರವಾಗಿ ಗಾಯಗೊಂಡಿದ್ದರು.

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಂಜುನಾಥ ಕೊನೆಯುಸಿರೆಳೆದ. ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು