ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆವರಣ ಸ್ವಚ್ಛಗೊಳಿಸಿದ ಯುವಕರು

ಲಾಕ್‍ಡೌನ್‍ ಸಮಯದ ಸದುಪಯೋಗ; ಹಿರಿಯರ ಮೆಚ್ಚುಗೆ
Last Updated 26 ಮೇ 2020, 2:16 IST
ಅಕ್ಷರ ಗಾತ್ರ

ಕೊಪ್ಪಳ: ಲಾಕ್‍ಡೌನ್‍ನ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಯುವಕರು ಗ್ರಾಮದ ಸರ್ಕಾರಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.

ತಾಲ್ಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಗ್ರಾಮದ ಸ್ವಾಮಿವಿವೇಕಾನಂದ ಗೆಳೆಯರ ಬಳಗದ ಯುವಕರು ಸ್ವಪ್ರೇರಣೆಯಿಂದ ಸ್ವಚ್ಛಗೊಳಿಸಿದರು.

ಮೂರು ದಿನ ನಡೆದ ಈ ಸ್ವಚ್ಛತಾ ಕೆಲಸ ಊರಿನ ಹಿರಿಯರ ಮೆಚ್ಚುಗೆಗೆ ಪಾತ್ರವಾಯಿತು. ಮೊದಲ ದಿನ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾತ್ರ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.ನಂತರ ಇಡೀ ಗ್ರಾಮದ ಯುವಕರು ಈ ಸೇವಾ ಕೆಲಸದಲ್ಲಿ
ತೊಡಗಿಕೊಂಡರು.

ಬಳಗದಿಂದ ಮುಂದಿನ ಹದಿನೈದು ದಿನ ಶಾಲೆಯ ಮತ್ತು ಸರ್ಕಾರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುವ ಉದ್ದೇಶ ಹೊಂದಲಾಗಿದೆ.ಇಂತಹ ಕೆಲಸಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ನಡೆಯಬೇಕು. ಇದರ ಸಂಪೂರ್ಣ ಜವಾಬ್ದಾರಿಯನ್ನು ಊರಿನ ಹಿರಿಯರು ವಹಿಸಿಕೊಳ್ಳಬೇಕು.ಸ್ವಚ್ಛತಾ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ, ಸಾಮಾಜಿಕ ಕರ್ತವ್ಯ ನಿಭಾಯಿಸಬೇಕು ಎಂದು ಗ್ರಾಮದ ಶಿವಪ್ರಸಾದ್ ಹಾರೋಗೇರಿ ಹೇಳಿದರು.

ಅಲ್ಲದೆ ವಿಶ್ವ ಪರಿಸರ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮದಲ್ಲಿ ಸುಮಾರು 200 ಸಸಿಗಳನ್ನು ನೆಡುವ ಯೋಚನೆ ಇದೆ. ಹಿರಿಯರು ಇದಕ್ಕೆ ಸಹಾಯ ನೀಡಬೇಕಿದೆ ಎಂದು ಅವರು ಮನವಿ ಮಾಡಿದರು.

ಗ್ರಾಮದ ಮುಖಂಡರಾದಚನ್ನಪ್ಪ, ನಾಗರೆಡ್ಡಿ, ವೀರೇಶ ಸಜ್ಜನ್, ಶರಣಪ್ಪ ಮತ್ತೂರು, ಹನುಮರೆಡ್ಡಿ ಬೆಲ್ಲಡಗಿ, ಅರವಿಂದ ಬಡಿಗೇರ್, ವೀರೇಶ್ ಹಿರೇಮಠ, ರಾಜೇಶ ಸಿಂಪಿ, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT