ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ ಸಾಹಿತ್ಯದಿಂದ ಸಂಸ್ಕಾರಯುತ ಜೀವನ

ಕುಕನೂರು: ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪರಿಸರವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ಸಾಹಿತ್ಯದ ಪ್ರೀತಿ ಜೀವನ ಪ್ರೀತಿಯು ಆಗಿರುವುದರಿಂದ ಮನುಷ್ಯನಿಗೆ ಅನುಭವ ಓದಗಿಸುವ ಮಾಧ್ಯಮ ಸಾಹಿತ್ಯವಾಗಿದೆ ಎಂದು ಹಿರಿಯ ಸಾಹಿತಿ ಕೆ.ಎಲ್.ಕುಂದರಗಿ ಅಭಿಪ್ರಾಯ ಪಟ್ಟರು.
Last Updated 3 ಜನವರಿ 2019, 16:32 IST
ಅಕ್ಷರ ಗಾತ್ರ

ಕುಕನೂರು: ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪರಿಸರವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ಸಾಹಿತ್ಯದ ಪ್ರೀತಿ ಜೀವನಪ್ರೀತಿಯು ಆಗಿರುವುದರಿಂದ ಮನುಷ್ಯನಿಗೆ ಅನುಭವ ಓದಗಿಸುವ ಮಾಧ್ಯಮ ಸಾಹಿತ್ಯವಾಗಿದೆ ಎಂದು ಹಿರಿಯ ಸಾಹಿತಿ ಕೆ.ಎಲ್.ಕುಂದರಗಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ನಾಗರಿಕ ವೇದಿಕೆ ವತಿಯಿಂದ ನಡೆದ ಉತ್ಸವದಲ್ಲಿ ಗುರವಾರ ಕವಿಗೋಷ್ಠಿಯಲ್ಲಿ ಆಕಾಶಕೊಂದು ಏಣಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮನುಷ್ಯನ ಆಶಯಗಳಿಗೆ ಸ್ಪಂದಿಸುವ ಬರವಣಿಗೆಗಳು ಕಲ್ಪನೆ ಮತ್ತು ಕನಸುಗಳಿಂದ ಬದುಕಿನ ಹೊಸ ಸಾಧ್ಯತೆ ಅನಾವರಣಗೊಳ್ಳುವುದು. ಸುಸಂಸ್ಕೃತ ಮನಸ್ಸು,ಸಂಸ್ಕಾರಯುತವ್ಯಕ್ತಿತ್ವ ದುರ್ವಿಚಾರಗಳನ್ನು ಒಪ್ಪಿಕೊಳ್ಳದು. ಮನಸ್ಸಿನಲ್ಲಿ ಬೇರೂರುವ ಶ್ರೇಷ್ಠ ಮೌಲ್ಯಗಳನ್ನು ಸಾಹಿತ್ಯದ ಮೂಲಕ ನೀಡಬೇಕು. ಕೊಲೆ, ರಕ್ತಪಾತ, ದರೋಡೆ, ಹಿಂಸೆಗಳನ್ನು ಬಿಂಬಿಸುವ ಸಾಹಿತ್ಯಗಳು ಉತ್ತಮ ಸಾಹಿತ್ಯಗಳ ಮಧ್ಯೆ ನುಗ್ಗಿ ಬರುತ್ತಿವೆ. ಈ ರೀತಿಯ ವಿಚಾರಗಳ ಓದುವಿಕೆಗೆ ಜನರು ಒಗ್ಗಿಕೊಳ್ಳುವುದರ ಬದಲು ಸಮಾಜಕ್ಕೆ ಉತ್ತಮ ವಿಚಾರ, ಸಂದೇಶ ಸಾರುವ ಸಾಹಿತ್ಯ ಮೂಡಿ ಬರಬೇಕು ಎಂದರು

ಕಾಯ೵ಕ್ರಮ ಉದ್ಘಾಟಿಸಿ ಮಾತನಾಡಿದ ಉಪ ನಿದೇ೵ಶಕ ವಿರೇಶ ಹುನಗುಂದ, ಪ್ರತಿ ಮನುಷ್ಯ ಇತರೆಲ್ಲ ಆಯಾಮಗಳಿಗಿಂತಲೂ ಕವಿತೆಗೆ, ಹಾಡಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾನೆ. ಮಾತಿನಲ್ಲಿ ಹೇಳಲು ಅಸಾಧ್ಯವಾದುದನ್ನು ಕವಿತೆಯ ಮೂಲಕ ಹೊರಹಾಕಲು ಸಾಧ್ಯ. ಇದು ಕವಿತೆಗಿರುವ ಶಕ್ತಿ ಮತ್ತು ಆಕರ್ಷಿಸುವ ಗುಣ. ಅನಿರ್ವಚನೀಯವಾದ ಕವಿತೆ ಮನುಷ್ಯ ಜೀವನದ ಅತ್ಯುತ್ತಮ ಸಂಗಾತಿ ಮತ್ತು ನೊಂದ ಹೃದಯಕ್ಕೆ ಸಮಾಧಾನವನ್ನು ನೀಡುತ್ತದೆ ಎಂದರು.

ಸಾಹಿತಿ ಡಾ. ಫಕಿರಪ್ಪ ವಜ್ರಬಂಡಿ ಮಾತನಾಡಿ, ಕವಿ ತನ್ನ ವಿಷಯ ವಸ್ತುವಿನ ಕೊರತೆ ಉಂಟಾದಾಗ ಭಾವುಕನಾಗಿ ಅಸಾಮಾನ್ಯನಂತೆ ವರ್ತಿಸಬಹುದು. ಕಾವ್ಯದ ಸೃಷ್ಟಿಯನ್ನು ಪ್ರಸವ ವೇದನೆಗೆ ಹೋಲಿಸುವುದುಂಟು. ಕಾವ್ಯ ಸೃಷ್ಟಿಯಲ್ಲುಂಟಾಗುವ ಅತೃಪ್ತಿಯೇ ಮತ್ತೊಂದು ಕವಿತಾ ರಚನೆಗೆ ಪ್ರೇರಣೆಯಾಗುತ್ತದೆ. ಸೃಷ್ಟಿಸುತ್ತಾ ಸತ್ಯಾನ್ವೇಷಣೆಯನ್ನು ಹುಡುಕುತ್ತಾ ಪರಿಪೂರ್ಣತೆಯ ಘಟ್ಟವನ್ನು ತಲುಪಿದಾಗ ಆತನನ್ನು ಪರಿಪೂರ್ಣ ಕವಿ ಎಂದು ಸಮಾಜ ಗುರುತಿಸುತ್ತದೆ ಎಂದು ಹೇಳಿದರು.

ಕವಿ ಗೋಷ್ಠಿಯ ಸವಾಧ್ಯಕ್ಷೆ ಅನ್ನಪೂಣ೵ ಮನ್ನಾಪುರ ಮಾತನಾಡಿದರು.

60 ಕ್ಕೂ ಹೆಚ್ಚು ಕವಿಗಳು ಗೋಷ್ಠಿಯಲ್ಲಿ ಭಾಗವಹಿದ್ದರು. ಕವಿಗಳಿಗೆ ರುಕ್ಮಣೀಭಾಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಗರಿಕ ವೇದಿಕೆಯ ರಾಜ್ಯಧ್ಯಕ್ಷ ಮಹೇಶಬಾಬು ಸುವೆ, ಜಿಲ್ಲಾ ಅಧ್ಯಕ್ಷ ಜಿ.ಎಸ್ ಗೋನಾಳ, ತಾಲ್ಲೂಕು ಅಧ್ಯಕ್ಷ ಮಂಜುನಾಥ ಅಂಗಡಿ, ರಮೇಶ ಡಾಣಿ, ಶರತ್ ಚಂದ್ರ ಕಳ್ಳಿ. ಶಾಂತಾ ಕುಂಟಿನಿ, ಶಿಲ್ಪಾ ಮ್ಯಾಗೇರಿ, ಅಲ್ಲಾವುದ್ಧಿನ್ ಎಮ್ಮಿ, ರುದ್ರಪ್ಪ ಬಂಡಾರಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT