ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಆರ್‌ಪಿಪಿ ಇತಿಹಾಸ ಸೃಷ್ಟಿಸಬಹುದು’: ಜನಾರ್ದನ ರೆಡ್ಡಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿದ ವಿವಿಧ ಪಕ್ಷಗಳ ಕಾರ್ಯಕರ್ತರು
Last Updated 21 ಜನವರಿ 2023, 7:29 IST
ಅಕ್ಷರ ಗಾತ್ರ

ಗಂಗಾವತಿ: ‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಕಂಡಿಲ್ಲವೆಂದು ಎಲ್ಲರೂ ಹೇಳುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಗಂಗಾವತಿ ಕ್ಷೇತ್ರದಿಂದಲೇ ನನ್ನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಪ್ರಾದೇಶಿಕ ಪಕ್ಷದ ಯಶಸ್ಸು ಆರಂಭವಾಗಬಹುದು. ಇತಿಹಾಸವನ್ನೂ ಸೃಷ್ಟಿಸಬಹುದು’ ಎಂದು ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.

ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಕೆಆರ್‌ಪಿಪಿ ಸ್ಥಾಪಿಸಿದ ನಂತರ ಪಕ್ಷದ ಬಲವರ್ಧನೆಗಾಗಿ ರಾಜ್ಯದ ಮೂಲೆಗಳಿಂದ ವಿವಿಧ ಸಮಾಜಗಳ ಮುಖಂಡರು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ನಿರೀಕ್ಷೆ ಮೀರಿ ಪಕ್ಷ ಸೇರುತ್ತಿದ್ದಾರೆ. ಈಗಾಗಲೇ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ವಿಜಯಪುರ, ಚಿತ್ರದುರ್ಗ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಿಂದ ಅಭ್ಯರ್ಥಿ ಕಣಕ್ಕಿ ಸಲು ಸಿದ್ಧತೆ ನಡೆಸಲಾಗಿದೆ’ ಎಂದರು.

‘3-4 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ಗಳು ಸಿದ್ಧವಾಗುತ್ತಿದ್ದು, ಕೂಡಲೇ ಜನರ ಮುಂದಿಡ ಲಾಗುವುದು’ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಕಂಡಿಲ್ಲ ಎಂಬ ಸಾರಿಗೆ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಯಾವುದನ್ನು ತಲೆ ಕೆಡಿಸಿಕೊ ಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವ ಅಭ್ಯರ್ಥಿಗಳನ್ನು ಸಮೀಕ್ಷೆ ಆಧಾರಿತವಾಗಿಯೇ ನಿರ್ಧರಿಸಿದ್ದು, ವರ್ಚಸ್ಸು ಇರುವಂತಹ ಅಭ್ಯರ್ಥಿ ಗಳಾಗಿದ್ದಾರೆ. ನಾನು ಬೇರೆಯವರನ್ನು ಸೋಲಿಸಲು ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುತ್ತಿಲ್ಲ. ನಾನು ಗೆಲ್ಲಲು ಅಖಾಡಕ್ಕೆ ಇಳಿಸುತ್ತಿದ್ದೇನೆ’ ಎಂದರು.

ಪದಾಧಿಕಾರಿಗಳ ಆಯ್ಕೆ: ಕೆಆರ್‌ಪಿಪಿ ಸಂಸ್ಥಾಪಕ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ ನಂತರ ಕೊಪ್ಪಳದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದ್ದು, ಅದರ ಭಾಗವಾಗಿ ಶುಕ್ರವಾರ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಮನೋಹರಗೌಡ ಹೇರೂರು, ಗಂಗಾವತಿ ನಗರ ಘಟಕದ ಅಧ್ಯಕ್ಷ ರಾಗಿ ವಿರೇಶ್ ಬಲಕುಂದಿ, ಗ್ರಾಮೀಣ ಅಧ್ಯಕ್ಷರಾಗಿ ದುರ್ಗಪ್ಪ ಆಗೋಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಪಕ್ಷದ ಮುಖಂಡ ಜೀಲಾನ್ ಪಾಷ, ಜೋಗದ ದುರ್ಗಪ್ಪ ನಾಯಕ ಹಾಗೂ ಕಾರ್ಯಕರ್ತರು ಇದ್ದರು.

‘ನನ್ನ ವೇಗ ತಡೆಯದೇ ಕಟ್ಟಿ ಹಾಕಿದ್ದರು’

ಕೊಪ್ಪಳ: ‘ವಿಮಾನ ಪ್ರತಿ ಗಂಟೆಗೆ ಒಂದು ಸಾವಿರ ಕಿ.ಮೀ. ವೇಗದಲ್ಲಿ ಓಡುವಂತೆ ನನ್ನ ತಲೆಯೂ ಅದಕ್ಕಿಂತ ವೇಗದಲ್ಲಿ ಓಡುತ್ತದೆ. ಅದನ್ನು ತಡೆದುಕೊಳ್ಳಲು ಆಗದವರು 12 ವರ್ಷಗಳ ಕಾಲ ನನ್ನ ಕೈ ಹಾಗೂ ಕಾಲುಗಳಿಗೆ ಹಗ್ಗ ಕಟ್ಟಿ ಹಾಕಿದ್ದರು’ ಎಂದು ಜನಾರ್ದನ ರೆಡ್ಡಿ ಹೇಳಿದರು.

ಬುಧವಾರ ತಾಲ್ಲೂಕಿನ ಬೂದಗುಂಪಾದಲ್ಲಿ ಪಕ್ಷಕ್ಕೆ ಕಾರ್ಯಕರ್ತರನ್ನು ಬರಮಾಡಿಕೊಂಡು ಮಾತನಾಡಿ ‘ರಾಜ್ಯದಲ್ಲಿ ನಮ್ಮ ಪಕ್ಷವಿಲ್ಲದೇ ಸರ್ಕಾರ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣ ಮಾಡೋಣ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೆ. ಆದರೆ, ಬೆಂಗಳೂರು ಹಾಗೂ ಮೈಸೂರು ಭಾಗದಿಂದಲೂ ಅಭ್ಯರ್ಥಿಗಳು ಮುಂದೆ ಬರುತ್ತಿದ್ದಾರೆ’ ಎಂದರು.

‘ಹಿಂದೆ ರಾಣಿ ಚನ್ನಮ್ಮಳ ಹಿಂದೆ ಸಂಗೊಳ್ಳಿ ರಾಯಣ್ಣ ಇದ್ದರೂ ಮಲ್ಲಪ್ಪ ಶೆಟ್ಟಿಯಂಥವರೂ ಇದ್ದರು. ರಾಜಕೀಯದಲ್ಲಿ ನನ್ನ ಹಿಂದೆ ಅದೇ ರೀತಿ ಅನೇಕರು ಇದ್ದಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗಂಗಾವತಿ ಕ್ಷೇತ್ರದಲ್ಲಿ ಯಾವ ಜಾತಿ ಬೇಧವಿಲ್ಲದೇ ಅಭಿವೃದ್ಧಿ ಮಾಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT