ದೇವೇಗೌಡರಿಗೆ ಕಡಿಮೆ ಮಕ್ಕಳಾಗಿರುವುದು ನೋವಾಗಿದೆ: ಈಶ್ವರಪ್ಪ ವ್ಯಂಗ್ಯ

ಗುರುವಾರ , ಮಾರ್ಚ್ 21, 2019
27 °C
ಈಶ್ವರಪ್ಪ ಪತ್ರಿಕಾಗೋಷ್ಠಿ

ದೇವೇಗೌಡರಿಗೆ ಕಡಿಮೆ ಮಕ್ಕಳಾಗಿರುವುದು ನೋವಾಗಿದೆ: ಈಶ್ವರಪ್ಪ ವ್ಯಂಗ್ಯ

Published:
Updated:
Prajavani

ಶಿವಮೊಗ್ಗ: ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ 28 ಮಕ್ಕಳಿದ್ದಿದ್ದರೇ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಅವರ ಕುಟುಂಬದವರೇ ಸ್ಪರ್ಧಿಸಬಹುದಿತ್ತು. ಆದರೆ ಅವರಿಗೆ ಕಡಿಮೆ ಮಕ್ಕಳಾಗಿರುವುದು ನೋವಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ದೊಂಬರಾಟ ನಡೆಯುತ್ತಿದೆ. ದೇವೇಗೌಡರು ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ ಎನ್ನುತ್ತಾರೆ. ಆದರೆ, ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್, ಪ್ರಜ್ವಲ್ ಇವರ್‍ಯಾರು ತಮ್ಮ ಕುಟುಂಬದವರಲ್ಲ. ನಾನೊಬ್ಬ ಬ್ರಹ್ಮಚಾರಿ ಎಂದು ಘೋಷಿಸಲಿ ಎಂದು ಒತ್ತಾಯಿಸಿದರು.

ಮಂಡ್ಯದ ಬೆಳವಣಿಗೆಯನ್ನು ಕಾದು ನೋಡುತ್ತಿದ್ದೇವೆ. ಈಗಾಗಲೇ ಬಿಜೆಪಿ ನಾಯಕರು ಸಹೋದರಿ ಸುಮಲತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲೆ ಬೆಂಗಳೂರಿನಲ್ಲಿ ನಡೆಯುವ ಪಕ್ಷದ ಸಭೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ, ಇಲ್ಲವೆ ಸುಮಲತಾ ಅವರಿಗೆ ಬೆಂಬಲ ನೀಡಬೇಕೋ ಎಂಬ ಬಗ್ಗೆ ನಾಯಕರು ತೀರ್ಮಾನಿಸಲಿದ್ದಾರೆ. ಇನ್ನೂ ಎದುರಾಳಿ ಪಕ್ಷದವರು ತಲೆ ಕೆಳಮಾಡಿ, ಕಾಲು ಮೇಲೆ ಮಾಡಿದರೂ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 30

  Happy
 • 5

  Amused
 • 3

  Sad
 • 2

  Frustrated
 • 6

  Angry

Comments:

0 comments

Write the first review for this !