ಶನಿವಾರ, ಡಿಸೆಂಬರ್ 14, 2019
21 °C

ಮಾಧುಸ್ವಾಮಿ ಕ್ಷಮೆಯಾಚನೆಗೆ ಕುರುಬರ ಸಂಘ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕಾನೂನು ಸಚಿವ ಮಾಧುಸ್ವಾಮಿ ಕನಕ ಗುರುಪೀಠದ ಶ್ರೀಗಳಿಗೆ ಧಮಕಿ ಹಾಕುವ ಮೂಲಕ ಉದ್ಧಟತನ ತೋರಿದ್ದಾರೆ. ತಕ್ಷಣ ಅವರು ಶ್ರೀಗಳ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ರಂಗನಾಥ್ ಆಗ್ರಹಿಸಿದರು.

ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ವೃತ್ತಕ್ಕೆ 2006ರಲ್ಲಿ ಕನಕದಾಸರ ವೃತ್ತ ಎಂದು ನಾಮಕರಣ ಮಾಡಲಾಗಿತ್ತು. ಈಚೆಗೆ ರಸ್ತೆ ವಿಸ್ತರಣೆ ಸಮಯದಲ್ಲಿ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಲು ಒತ್ತಾಯ ಕೇಳಿಬಂದಿದಿತ್ತು. ಆಗ ಕನಕ ಪೀಠದ ಶ್ರೀಗಳು ಬೇರೊಂದು ವೃತ್ತಕ್ಕೆ ಶಿವಕುಮಾರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಲು ಸಲಹೆ ನೀಡಿದ್ದರು. ಆಗ ಸಚಿವ ಮಾಧುಸ್ವಾಮಿ ಏರು ಧ್ವನಿಯಲ್ಲಿ ಶ್ರೀಗಳ ಕಡೆ ಕೈ ತೋರಿಸುತ್ತಾ ಧಮಕಿ ಹಾಕಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಶ್ರೀಗಳ ಕ್ಷಮೆಯಾಚಿಸಬೇಕು.  ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲೆಡೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಗೊಳ್ಳಿ ರಾಯಣ್ಣ ಕುರಿಬರ ವೇದಿಕೆ ಅಧ್ಯಕ್ಷ ರಾಮಕೃಷ್ಣ ಮೂಡ್ಲಿ, ಸಮಾಜದ ಮುಖಂಡರಾದ ವಾಟಾಳ್ ಮಂಜುನಾಥ್, ಶ್ರೀನಿವಾಸ್ ವಡ್ಡಪ್ಪ, ಚಂದ್ರು, ರಾಮಿನಕೊಪ್ಪ ರಘು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು