ಬುಧವಾರ, ಫೆಬ್ರವರಿ 19, 2020
30 °C

ಕುವೆಂಪು ವಿವಿ ಅಂತರ ಕಾಲೇಜು ಮಟ್ಟದ ಸೆಪೆಕ್ ಟಕ್ರಾ ಕ್ರೀಡಾ ಪಂದ್ಯಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ ಪುರುಷರ ಸೆಪೆಕ್ ಟಕ್ರಾ ಕ್ರೀಡಾ ಪಂದ್ಯಾವಳಿಯಲ್ಲಿ ಭದ್ರಾವತಿ ಬೊಮ್ಮನಕಟ್ಟೆಯ ಸರ್‌.ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜಿನ ಕ್ರೀಡಾಪಟುಗಳು ಪ್ರಥಮ ಬಹುಮಾನವನ್ನು ಪಡೆದುಕೊಂಡರು.

ದ್ವೀತಿಯ ಬಹುಮಾನವನ್ನು ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಪಟುಗಳು ಹಾಗೂ ತೃತೀಯ ಬಹುಮಾನವನ್ನು ಯುಸಿಪಿಇ ಶಂಕರಘಟ್ಟ ಕ್ರೀಡಾಪಟುಗಳು ಪಡೆದುಕೊಂಡರು. ವಿಜೇತ ತಂಡದ ಕ್ರೀಡಾಪಟುಗಳಿಗೆ ಪಾರಿತೋಷಕ ಜತೆ ವೈಯಕ್ತಿಕವಾಗಿ ಪದಕಗಳನ್ನು ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಿ.ಆರ್‌. ಹೆಗಡೆ, ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವನ್ನು ಕ್ರೀಡೆ ಕಾಪಾಡುತ್ತದೆ. ಮೊದಲ ಬಾರಿ ನಮ್ಮ ಕಾಲೇಜಿನಲ್ಲಿ ಸೆಪೆಕ್ ಟಕ್ರಾ ಕ್ರೀಡಾ ಪಂದ್ಯಾವಳಿಯ ಆಯೋಜಿಸಿದ್ದು,ಕ್ರೀಡಾ ಪಟುಗಳು ಉತ್ತಮವಾಗಿ ಆಟವಾಡಿದ್ದಾರೆ. ಸೋತವರು ಪುನಃ ಗೆಲುವಿಗಾಗಿ ಪ್ರಯತ್ನ ನಡೆಸಬೇಕು. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ದೈಹಿಕ ನಿರ್ದೇಶಕ ಎಚ್‌.ಟಿ. ಜಯಕೀರ್ತಿ, ಈ ಕಾಲೇಜಿನ ನಡೆಯುವ ಕ್ರೀಡಾ ಪಂದ್ಯಾವಳಿ ಯಶಸ್ವಿಯಾಗಲು ಕಾಲೇಜಿನ ಉಪನ್ಯಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಉತ್ತಮ ಸಹಕಾರ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಅಂತರ ವಿಶ್ವವಿದ್ಯಾಲಯ ಮಟ್ಟದ ಪಂದ್ಯಾವಳಿಯನ್ನು ಈ ಕಾಲೇಜಿನಲ್ಲಿ ಆಯೋಜಿಸಲು ನೀವು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸೆಪೆಕ್ ಟಕ್ರಾ ಕ್ರೀಡೆ ಭಾರತ ತಂಡದ ತೀರ್ಪುಗಾರ ಕೇಶವ ಸೂರ್ಯವಂಶಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗುರುರಾಜ್‌ರಾವ್‌ ಜಗತಾಪ್‌, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಸಿ. ವೇಣುಗೋಪಾಲ್‌, ಕಾಲೇಜು ವಿದ್ಯಾರ್ಥಿ ಕ್ಷೇಮಾಧಿಕಾರಿ ಆರ್‌.ಕೆ. ವಿನಯ್‌, ಕ್ರೀಡಾ ಪಂದ್ಯಾವಳಿ ಸಂಯೋಜಕ ಡಾ.ಎ.ಬಿ. ಅನಿಲ್‌ಕುಮಾರ್‌, ಕುವೆಂಪು ವಿವಿ ವಿವಿಧ ಕಾಲೇಜುಗಳ ದೈಹಿಕ ನಿರ್ದೇಶಕರಾದ ವೈ. ವಸಂತ್‌ಕುಮಾರ್, ರೋಹನ್‌ ಡಿಕೋಸ್ಟಾ, ಎಂ.ಡಿ. ವಿಶ್ವನಾಥ್‌, ತೀರ್ಪುಗಾರರಾದ ಪವನ್‌, ಅರುಣ್‌, ಮಂಜುನಾಥ್‌, ಹಳೇ ವಿದ್ಯಾರ್ಥಿಗಳಾದ ವಿನಯ್‌, ರಘು ನಿರ್ಮಿತ್, ಭಂಡಾರಿ ಗಿರೀಶ್‌, ಅಮಿತ್, ವಿವಿಧ ವಿಭಾಗ ಉಪನ್ಯಾಸಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು