ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ಸಂಸ್ಥೆಗಳು ಹಣಗಳಿಕೆಯಾಗದಿರಲಿ’

Last Updated 2 ಫೆಬ್ರುವರಿ 2018, 8:38 IST
ಅಕ್ಷರ ಗಾತ್ರ

ಕಲಬುರ್ಗಿ: ‘ಆಧುನಿಕ ಯುಗದಲ್ಲಿ ಶಿಕ್ಷಣ ವ್ಯಾಪಾರೀಕರಣವಾಗಿದ್ದು, ಬಹುತೇಕ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಹಣಗಳಿಕೆಯಾಗಿದೆ.  ಇಂಗ್ಲಿಷ್‌ ಮಾಧ್ಯಮ ಶಾಲಾಗಳಂತೂ ಉಳ್ಳವರ ಸ್ವರ್ಗವಾಗಿವೆ’ ಎಂದು ಕ್ಲಸ್ಟರ್‌ ಉತ್ತರ ವಲಯದ ಸಿಆರ್‌ಪಿ ಮಲ್ಲಿನಾಥ ಆರ್‌.ಪಾಟೀಲ ಹೇಳಿದರು.

ಇಲ್ಲಿನ ಹನುಮಾನ ಮಂದಿರದ ಆವರಣದಲ್ಲಿ ಈಚೆಗೆ ಹಮ್ಮಿಕೊಳಡಿದ್ದ ಯಶಸ್ವಿನಿ ವಿದ್ಯಾಮಂದಿರ ಶಿಶು ವಿಹಾರ ಪೂರ್ವ ಮತ್ತು ಪ್ರಾಥಮಿಕ ಶಾಲೆ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಡವರ, ನಿರ್ಗತಿಕರ ಮಕ್ಕಳಿಗೆ ಶಿಕ್ಷಣ ಕೊಡುವುದು ಕನಸಿನ ಮಾತಾಗಿದೆ. ಇದಕ್ಕೆ ಅಪವಾದವೆಂಬಂತೆ ಕೆಲವೆ ಕೆಲವು ಶಿಕ್ಷಣ ಸಂಸ್ಥೆಗಳು ಜ್ಞಾನಾರ್ಜನೆಯನ್ನು ಮೂಲ ಉದ್ದೇಶವನ್ನಾಗಿಸಿಕೊಂಡಿದೆ’ ಎಂದರು.

‘ಒಂದು ಶಾಲೆ ಯಶಸ್ವಿಯಾಗಿ ಸಾಗಬೇಕಾದರೆ ಇಲಾಖೆ ಮತ್ತು ಪಾಲಕರ ಜತೆ ಉತ್ತಮವಾದ ಸಂಬಂಧ ಹೊಂದಿರಬೇಕಾಗುತ್ತದೆ. ಜೊತೆಗೆ ಶಿಕ್ಷಕರು ಪಠ್ಯಬೋಧನೆಯ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು’ ಎಂದು ಹೇಳಿದರು.

ಭೀಮಶೆಟ್ಟಿ ರುದ್ರಾಕ್ಷಿ, ಪ್ರತಾಪ ಜಿ.ಕಾಕಡೆ, ಶಿವರಾಜ ಖೂಬಾ, ಮಾಧವಿ ಕಿಣಗಿ, ಬಸವರಾಜ ಜಮಾದಾರ, ರಾಮಚಂದ್ರ ಕೌರವ, ಭಾರತಿ ಬಿ.ಆಸಂಗಿ, ಬಬಿತಾ ಎಂ.ಘಾಟಗೆ, ಶರಣಮ್ಮ ಜಮಾದಾರ, ಸುನಂದಾ ನಂದಿಕೂರ, ಸೀತಾ, ಮಹಾನಂದಾ, ಸುಮಂಗಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT