ಭಾನುವಾರ, ಸೆಪ್ಟೆಂಬರ್ 15, 2019
25 °C

ಲ್ಯಾಪ್‌ಟಾಪ್ ವಿತರಣೆ

Published:
Updated:
Prajavani

ವಿಜಯಪುರ: ಮಹಾನಗರ ಪಾಲಿಕೆಯ ನೌಕರರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ಗಜಾನನ ಮಹೋತ್ಸವ ಹಾಗೂ ಅಂಧ ಮಕ್ಕಳಿಗೆ ಇಂಟರ್‌ಪಾಯಿಂಟ್‌ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇಂಟರ್‌ಪಾಯಿಂಟ್, ಬ್ಲೆಜರ್ ವಿತರಿಸಿದರು.

ಮಲ್ಲಿಕಾರ್ಜುನ ನಗರದ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳಿಗೆ ಇಂಟರ್‌ಪಾಯಿಂಟ್, ಪ್ರವಾಹ ಪೀಡಿತ ಜನರಿಗೆ ನೌಕರರ ಸಂಘದಿಂದ ಸಂಗ್ರಹಿಸಿದ ₹21 ಸಾವಿರ ಚೆಕ್, ಶಾಸಕರ ಕೋಟಾದಡಿಯಲ್ಲಿ ಎಸ್‌ಸಿ, ಎಸ್‌ಟಿ ಫಲಾನುಭವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಯಿತು.

ಪಾಲಿಕೆ ಆಯುಕ್ತ ಡಾ.ಔದ್ರಾಮ, ಎಂ.ಎಸ್.ಕರಡಿ, ಉಮೇಶ ವಂದಾಲ, ಶಿವಾನಂದ ಬುಯ್ಯಾರ, ವಿಜುಗೌಡ ಪಾಟೀಲ, ಶೀತಲಕುಮಾರ ಓಗಿ, ಪಾಂಡು ಸಾಹುಕಾರ ದೊಡ್ಡಮನಿ, ರಾಜೇಶ್ವರಿ ಚಲವಾದಿ ಇದ್ದರು.

Post Comments (+)