ನೌಕರರನ್ನು ಹರಪನಹಳ್ಳಿಯಲ್ಲೇ ಬಿಡಿ

7
ಡಿಸಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ

ನೌಕರರನ್ನು ಹರಪನಹಳ್ಳಿಯಲ್ಲೇ ಬಿಡಿ

Published:
Updated:

ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರನ್ನು ದಾವಣಗೆರೆ ಜಿಲ್ಲೆಯಲ್ಲೇ ಉಳಿಯಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡ ನಂತರ ಬೆಂಗಳೂರು ವಿಭಾಗದಿಂದ ಕಲಬುರ್ಗಿ ವಿಭಾಗಕ್ಕೆ ಸೇರುತ್ತದೆ. ಇದರಿಂದ ಆನೇಕ ನೌಕರರ ಬಡ್ತಿ ಮತ್ತು ಜೇಷ್ಠತೆಗೆ ತೊಡಕಾಗುವ ಸಾಧ್ಯತೆ ಇದೆ. ಮಾತೃ ಜಿಲ್ಲೆಯಿಂದ ಶಿಕ್ಷಣ ಇಲಾಖೆಯ ಶಿಕ್ಷಕರು ಬಳ್ಳಾರಿ ಜಿಲ್ಲೆಗೆ ಹೋದಲ್ಲಿ ಪುನಃ ದಾವಣಗೆರೆ ಜಿಲ್ಲೆಗೆ ಬರಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಇತರೆ ಇಲಾಖೆಯ ನೌಕರರಿಗೂ ಅನ್ಯಾಯವಾಗುತ್ತದೆ. ಮಾತೃ ಜಿಲ್ಲೆಯಲ್ಲಿ ಉಳಿಯಲು ಶೇ 5ರಷ್ಟು ಅವಕಾಶ ನೀಡುವುದರಿಂದ ಸಮಸ್ಯೆ ಪೂರ್ಣವಾಗಿ ಬಗೆಹರಿಯುವುದಿಲ್ಲ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಹಾಗಾಗಿ, ದಾವಣಗೆರೆ ಜಿಲ್ಲೆಯಲ್ಲೇ ಕರ್ತವ್ಯ ನಿರ್ವಹಿಸ ಬಯಸುವ ಎಲ್ಲಾ ಇಲಾಖೆಯ ಮತ್ತು ಎಲ್ಲಾ ವೃಂದ ನೌಕರರಿಗೆ ಖಾಲಿ ಹುದ್ದೆ ಕೊರತೆಯ ನೆಪ ಹೇಳದೆ ಹುದ್ದೆಗಳು ಖಾಲಿಯಾಗುವವರೆಗೆ ಬೇರೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆ ಮಾಡಿಯಾದರೂ ದಾವಣಗೆರೆ ಜಿಲ್ಲೆಯಲ್ಲೇ ಉಳಿಯಲು ಅವಕಾಶ ನೀಡಬೇಕು ಎಂದು ಸಂಘದ ಅಧ್ಯಕ್ಷ ಎಸ್. ಹಾಲೇಶಪ್ಪ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !