ಕಾನೂನು ಸಾಕ್ಷರತಾ ರಥ

7

ಕಾನೂನು ಸಾಕ್ಷರತಾ ರಥ

Published:
Updated:
Deccan Herald

ಮಾಗಡಿ: ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಲಯ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಡಿ.20ರಿಂದ 23ರವರೆಗೆ ತಾಲ್ಲೂಕಿನ ವಿವಿಧೆಡೆ ನಡೆಯಲಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಯೆರ್‌ಮಲ್‌ ಕಲ್ಪನಾ ತಿಳಿಸಿದರು.

ನ್ಯಾಯಾಲಯದ ಆವರಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ನ್ಯಾಯಾಧೀಶರು, ಹಿರಿಯ ವಕೀಲರು ಹಾಗೂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಗ್ರಾಮಸ್ಥರಲ್ಲಿ ಕಾನೂನಿನ ಅರಿವು ಮೂಡಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಜನರನ್ನು ಸೇರಿಸಲು ಮುಂದಾಗಬೇಕು ಎಂದರು.

ಹಿರಿಯ ವಕೀಲ ಜಿ.ಪಾಪಣ್ಣ ಮಾತನಾಡಿ, ಕಳೆದ ವರ್ಷ ಸಾಕ್ಷರತಾ ರಥ ತಾಲ್ಲೂಕಿನಲ್ಲಿ ಸಂಚರಿಸಿತ್ತು ಎಂದರು.

ಡಿ.20ರಂದು ಮಧ್ಯಾಹ್ನ 12 ಗಂಟೆಗೆ ಕಲ್ಯದ ಉರಿಗದ್ದುಗೇಶ್ವರ ಪ್ರೌಢಶಾಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಎಸ್‌.ಹೊನ್ನಸ್ವಾಮಿ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌ ಇತರೆ ಅಧಿಕಾರಿಗಳು, ವಕೀಲರು ಭಾಗವಹಿಸಲಿದ್ದಾರೆ. ಶಿವಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದರು.

ತಹಶೀಲ್ದಾರ್‌ ಎನ್‌.ರಮೇಶ್‌, ಹಿರಿಯ ವಕೀಲರಾದ ಡಿ.ಎಚ್‌.ಮಲ್ಲಿಕಾರ್ಜುನಯ್ಯ, ಕೆ.ಎಸ್‌.ಪ್ರಕಾಶ್‌, ದೇವರಾಜೇಗೌಡ, ಸಿಡಿಪಿಒ ಭಾರತಿದೇವಿ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್‌, ತಾಲ್ಲೂಕು ಪಂಚಾಯಿತಿ ಕಚೇರಿಯ ಮ್ಯಾನೇಜರ್‌ ಶ್ರೀನಿವಾಸ್‌, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್‌, ಕಾರ್ಯದರ್ಶಿ ನಾಗೇಶ್‌, ಸಹಾಯಕ ಸರ್ಕಾರಿ ಅಭಿಯೋಜನಕರಾದ ಶಾರದ, ಯಶೋಧ ಮಾತನಾಡಿದರು. ವಕೀಲರು, ಸಬ್‌ ಇನ್‌ಸ್ಪೆಕ್ಟರ್‌ ನಂದಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !