ಬದುಕು ಸಾರ್ಥಕದ ದರ್ಶನ ಗುರು ಮಾಡಲಿ

6

ಬದುಕು ಸಾರ್ಥಕದ ದರ್ಶನ ಗುರು ಮಾಡಲಿ

Published:
Updated:
Deccan Herald

ಸಾಗರ: ಬದುಕು ಸಾರ್ಥಕಗೊಳ್ಳುವ ಬಗೆಗಿನ ದರ್ಶನವನ್ನು ಗುರುಗಳು ಮಾಡಿಸಬೇಕು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ತಾಲೂಕಿನ ಭೀಮನಕೋಣೆಯ ಕಿನ್ನರ ಮೇಳದ ಸಭಾಂಗಣದಲ್ಲಿ ತುಮರಿಯ ಕಿನ್ನರ ಮೇಳ, ಕೆಳಮನೆಯ ಸಾಕೇತ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಕೆ.ಜಿ.ನಾರಾಯಣ ಸಂಸ್ಮರಣಾ ಕಾರ್ಯಕ್ರಮದಲ್ಲಿ ಶನಿವಾರ ಯಕ್ಷಗಾನ ವಿದ್ವಾಂಸ ಡಾ.ಜಿ.ಎಸ್.ಭಟ್ ದಂಪತಿ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುರುವಾದವನು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಾಗ ಅವುಗಳನ್ನು ತನ್ನ ಶಿಷ್ಯಂದಿರಿಗೆ ಪರಿಚಯಿಸಲು ಸುಲಭವಾಗುತ್ತದೆ. ತರಗತಿಯೊಳಗಿನ ಬೋಧನೆಯ ಜೊತೆಗೆ ತನ್ನೊಳಗಿನ ಪ್ರತಿಭೆ ಮತ್ತು ಆಸಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಬದಕನ್ನು ಸಾರ್ಥಕಗೊಳಿಸಿಕೊಳ್ಳುವ ಬಗೆಯನ್ನು ಶಿಕ್ಷಕರು ಮಾರ್ಗದರ್ಶಿಸಬೇಕು ಎಂದರು.

ಅಭಿನಂದನಾ ಭಾಷಣ ಮಾಡಿದ ಲೇಖಕ ಅ.ರಾ.ಶ್ರೀನಿವಾಸ ಮಾತನಾಡಿ, ಡಾ.ಜಿ.ಎಸ್.ಭಟ್ಟರಂಥ ಉಪನ್ಯಾಸಕರು. ಪಾಠ ಬೋಧನೆಯ ಜೊತೆಗೆ ವಿದ್ಯಾರ್ಥಿ ಸಮೂಹದಲ್ಲಿ ಸ್ನೇಹಸಂಬಂಧ ಕಾಪಾಡಿಕೊಳ್ಳುತ್ತಾರೆ. ವಿದ್ಯಾರ್ಥಿ ಸಮೂಹದ ಪ್ರಜ್ಞಾ ವಿಕಾಸಕ್ಕೆ ಕಾರಣಾರಾಗುತ್ತಾರೆ. ಯಕ್ಷಗಾನದ ಅಧ್ಯಯನದ ಸಂದರ್ಭದಲ್ಲಿ ಜಿ.ಎಸ್.ಭಟ್ಟರ ಸಂಶೋಧನಾ ಕೃತಿ ಅತ್ಯಂತ ಮೌಲಿಕವಾಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ಡಾ.ಜಿ.ಎಸ್.ಭಟ್ ಮಾತನಾಡಿದರು. ಸುಶೀಲಾ ಭಟ್ ವೇದಿಕೆಯಲ್ಲಿದ್ದರು.
ಕೆ.ಜಿ.ರಾಮರಾವ್ ಮತ್ತು ಭಾರ್ಗವ ಪ್ರಾರ್ಥನೆ ಮಾಡಿದರು. ಕೆ.ಜಿ.ಮಂಜುನಾಥ ಸ್ವಾಗತಿಸಿದರು. ಕೆ.ಜಿ.ರಾಮರಾವ್ ಸನ್ಮಾನ ಪತ್ರ ವಾಚಿಸಿದರು. ಕೆ.ಜಿ.ಕೃಷ್ಣಮೂರ್ತಿ ನಿರೂಪಿಸಿದರು. ನಂತರ ಪ್ರಸಾದ ಜೇರ್ಕಾಡಿ ಅಭಿನಯದಲ್ಲಿ ಮನೀಶ ಮಿತ್ರಾ ನಿರ್ದೇಶನದಲ್ಲಿ ಶೇಕ್ಸ್‌ಪಿಯರ್ ನಾಟಕ ಪ್ರಕರಣ ಏಕವ್ಯಕ್ತಿ ರಂಗಪ್ರಯೋಗದ ಪ್ರದರ್ಶನ ನಡೆಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !