7
ಮಳೆ ಕೊರತೆ: ಮಹಾರಾಷ್ಟ್ರ ಭಾಗದಿಂದ ಬಾರದ ನೀರು, ರಾಜ್ಯದ ಸರಹದ್ದಿನಲ್ಲಿ ಬಿದ್ದ ಮಳೆಗೆ ಬಂದ ನೀರು

ಆಲಮಟ್ಟಿ ಜಲಾಶಯದ ಮಟ್ಟ ಹೆಚ್ಚಳ

Published:
Updated:
ಆಲಮಟ್ಟಿ ಜಲಾಶಯದ ಹಿನ್ನೀರಿನ ಸುಂದರ ದೃಶ್ಯ ಗುರುವಾರ ಕಂಡು ಬಂದಿದ್ದು ಹೀಗೆ.. (ಚಿತ್ರ: ಚಂದ್ರಶೇಖರ ಕೋಳೇಕರ)

 

ಆಲಮಟ್ಟಿ: ಕೃಷ್ಣಾ ನದಿಯ ರಾಜ್ಯದ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯದ ಮಟ್ಟ ದಿನೇ ದಿನೇ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಿದ್ದು, ಅಲ್ಲಿನ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಹೀಗಾಗಿ ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಹರಿದು ಬರುತ್ತಿಲ್ಲ. ಬದಲಾಗಿ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿಯೇ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 10 ಟಿಎಂಸಿ ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ.

485 ಕ್ಯುಸೆಕ್‌ ನೀರಿನಿಂದ ಆರಂಭಗೊಂಡ ಒಳಹರಿವು ಗುರುವಾರ 8,461 ಕ್ಯುಸೆಕ್‌ ಗೇರಿದೆ. ಕೃಷ್ಣಾ ನದಿ ತಳ ಪಾತ್ರದ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದು, ಇದರಿಂದ ಶೀಘ್ರವೇ ಜಲಾಶಯ ಭರ್ತಿನಿಟ್ಟಿನಲ್ಲಿ ಸಾಗಲಿ, ಕಾಲುವೆಗೆ ಬೇಗನೆ ನೀರು ಹರಿಯಲಿ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಜಲಾಶಯದ ಮಟ್ಟ 516 ಮೀ. ವರೆಗೆ ಬರುವವರೆಗೂ ಕಾಲುವೆಗೆ ನೀರು ಹರಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಅನುಮತಿ ಅಗತ್ಯ. ಹೊಸ ಸರ್ಕಾರ ಬಂದ ಕಾರಣ ಸಲಹಾ ಸಮಿತಿ ಇನ್ನೂ ರಚನೆಯಾಗಿಲ್ಲ.

ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ: ಮಹಾರಾಷ್ಟ್ರದ ಜಲಾಶಯಗಳು ಭರ್ತಿಯಾದ ನಂತರ, ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುತ್ತಾರೆ. ಆಗ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ಅಂದರೆ ನಿತ್ಯ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತದೆ. ಆಗ ಆಲಮಟ್ಟಿ ಜಲಾಶಯ ಭರ್ತಿಯತ್ತ ಸಾಗುತ್ತದೆ.

ಸದ್ಯ ಆರಂಭಗೊಂಡಿರುವ ಒಳಹರಿವಿನಿಂದ ಕೃಷ್ಣೆ ನಿಧಾನವಾಗಿ ಕಂಗೊಳಿಸುತ್ತಿದ್ದು, ಹಿನ್ನೀರಿನಲ್ಲಿ ನೀರಿನ ಅಲೆಗಳು ಆರಂಭಗೊಂಡಿವೆ. ಗುರುವಾರ ಹುಣ್ಣಿಮೆಯಿದ್ದ ಕಾರಣ ಜಲಾಶಯದ ಹಿನ್ನೀರು ವ್ಯಾಪಕ ಅಲೆಗಳಿಂದ ಕಂಗೊಳಿಸುತ್ತಿತ್ತು.

ನೀರಿನ ಮಟ್ಟ: ಗುರುವಾರ ಲಭ್ಯವಾದ ಮಾಹಿತಿ ಪ್ರಕಾರ 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 504.34 ಮೀ ವರೆಗೆ ನೀರು ಸಂಗ್ರಹವಾಗಿದೆ. 123.081ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 24.284 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಜಲಾಶಯಕ್ಕೆ 8461 ಕ್ಯುಸೆಕ್‌ ಒಳಹರಿವಿದ್ದು, ಹೊರಹರಿವು ಇನ್ನೂ ಆರಂಭಗೊಂಡಿಲ್ಲ.

ಕಳೆದ ವರ್ಷ ಇದೇ ದಿನದಂದು (28/6/2017) ಜಲಾಶಯದ ಮಟ್ಟ 504.34 ಮೀ ಇದ್ದು, ಆಗ ಜಲಾಶಯಕ್ಕೆ 1360 ಕ್ಯುಸೆಕ್‌ ಒಳಹರಿವು ಇತ್ತು. ಆಗ ಜಲಾಶಯದಲ್ಲಿ 11.356 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !