ಲಕ್ಕಿ ಡ್ರಾದಲ್ಲಿ ದಾಂಧಲೆ; ಪೊಲೀಸರ ಪ್ರವೇಶ

7
ಉದ್ರಿಕ್ತರಿಂದ ಕಲ್ಯಾಣ ಮಂಟಪದ ಪೀಠೋಪಕರಣ ಧ್ವಂಸ

ಲಕ್ಕಿ ಡ್ರಾದಲ್ಲಿ ದಾಂಧಲೆ; ಪೊಲೀಸರ ಪ್ರವೇಶ

Published:
Updated:
Deccan Herald

ಸಿಂದಗಿ: ಪಟ್ಟಣದಲ್ಲಿ ಶನಿವಾರ ಸಂಜೆ ಸಾಯಿ ವೆಂಕಟ ಎಂಟರ್ ಪ್ರೈಸೆಸ್ ಹೆಸರಿನಲ್ಲಿ ನಾಲ್ವರು ನಡೆಸಿದ, ಲಕ್ಕಿ ಡ್ರಾ ಸಂದರ್ಭದಲ್ಲಿ ದಾಂಧಲೆ ನಡೆದಿದೆ.

ಪುಲಕೇಶಿ ಮಲ್ಲೇಶಿ ಬಳೂತಿ ಹೊನ್ನಳ್ಳಿ, ಸೋಮಶೇಖರ ಚನ್ನಬಸಯ್ಯ ಮಠ ಬಳಗಾನೂರ, ಬಸಪ್ಪ ಕಾಸಪ್ಪ ಮಾದರ ವಂದಾಲ, ಪಾರ್ವತಿ ಗುಂಡದ ವಂದಾಲ ಲಕ್ಕಿ ಡ್ರಾ ಸ್ಕೀಂ ಮಾಡಿದ್ದರು.

9999 ಸದಸ್ಯರಿಂದ ತಲಾ ₹ 700 ರೂಪಾಯಿ ಸಂಗ್ರಹಿಸಿ 42 ಬಹುಮಾನ ಇಡಲಾಗಿತ್ತು. ಶನಿವಾರ ಸಂಜೆ 14 ಬಹುಮಾನಗಳು ಡ್ರಾ ಆದರೂ, ಹಾಜರಿದ್ದ ಒಬ್ಬರಿಗೂ ಬಹುಮಾನ ಬಾರದಿದ್ದಾಗ ಅದರಲ್ಲಿದ್ದ ಕೆಲವರು ದಾಂಧಲೆ ಆರಂಭಿಸಿದ್ದಾರೆ. ಕಲ್ಯಾಣ ಮಂಟಪದಲ್ಲಿದ್ದ ಕುರ್ಚಿ, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.

ವಿಷಯ ತಿಳಿದ ಬಳಿಕ ಡಿ.ವೈ.ಎಸ್.ಪಿ ರವೀಂದ್ರ ಶಿರೂರ, ಸಿ.ಪಿ.ಐ ಮಹಾಂತೇಶ ದಾಮಣ್ಣವರ, ಪಿ.ಎಸ್.ಐ ನಿಂಗಪ್ಪ ಪೂಜಾರಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು ಎನ್ನಲಾಗಿದೆ.

ಪೊಲೀಸ್ ಠಾಣೆಗೆ ಮಾಹಿತಿ ನೀಡದೆ, ಡ್ರಾ ನಡೆಸಿದ ಬಗ್ಗೆ ಅಧಿಕಾರಿಗಳು ಸಂಘಟಕರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಹಾಜರಿದ್ದ ಮಹಿಳೆಯರು, ವೃದ್ಧ ಸದಸ್ಯರಿಗೆ ಸ್ಥಳದಲ್ಲಿಯೇ ತಲಾ ₹ 700 ವಾಪಸ್‌ ಕೊಡಿಸಿದ್ದಾರೆ. ಉಳಿದ ಎಲ್ಲ ಸದಸ್ಯರಿಗೂ, ಹಣ ಮರಳಿ ನೀಡುವುದಾಗಿ ಸಂಘಟಕರು ಘೋಷಿಸಿ, ಡ್ರಾ ರದ್ದುಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !