ಭಾನುವಾರ, ಜನವರಿ 19, 2020
25 °C

ವಾಟ್‌ವಾನಿ, ತಾರಾಗೆ ಮಾನಸ ರಾಷ್ಟ್ರೀಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಾನಸ ಟ್ರಸ್ಟ್‌ ಡಾ.ಅಶೋಕ್ ಪೈ ಸ್ಮರಣಾರ್ಥ ನೀಡುವ 2019ನೇ ಸಾಲಿನ ಮಾನಸ ರಾಷ್ಟ್ರೀಯ ಪ್ರಶಸ್ತಿ ಮಹಾರಾಷ್ಟ್ರದ ಕಾರಜತ್‌ನ ಶ್ರದ್ಧಾ ಪುನರ್ವಸತಿ ಕೇಂದ್ರದ ಸ್ಥಾಪಕ ಡಾ.ಭರತ್ ವಾಟ್‌ವಾನಿ, ಚೆನೈನ ಸ್ಕಿಜೋಫ್ರೇನಿಯಾ ರಿಸರ್ಚ್‌ ಫೌಂಡೇಶನ್‌ ನಿರ್ದೇಶಕಿ ಡಾ.ಆರ್.ತಾರಾ ಅವರಿಗೆ ಸಂದಿವೆ. 

ರಾಷ್ಟ್ರಮಟ್ಟದಲ್ಲಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಸಮಾಜಮುಖಿ ಸಾಧನೆ ಮಾಡಿದ ಇಬ್ಬರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಜೀವಮಾನ ಸಾಧನೆಗಾಗಿ ನೀಡುವ ವಿಶೇಷ ಪ್ರಶಸ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಡಿ.ನಾಗರಾಜ ಅವರು ಆಯ್ಕೆಯಾಗಿದ್ದಾರೆ. ಮೂರೂ ಪ್ರಶಸ್ತಿಗಳೂ ತಲಾ ₹ 75 ಸಾವಿರ ನಗದು, ಫಲಕ ಒಳಗೊಂಡಿವೆ.

ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ  ಜ.11ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ ಎಂದು ಮಾನಸ ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿ ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು