ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹7.25 ಲಕ್ಷ ಮೌಲ್ಯದ 26 ಬೈಕ್‌ ವಶ

12 ಪ್ರಕರಣ ಪತ್ತೆಮಾಡಿದ ಮಂಡ್ಯ ಪೂರ್ವ ಠಾಣೆ ಪೊಲೀಸರು, ನಾಲ್ವರ ಸೆರೆ
Last Updated 16 ಜನವರಿ 2021, 3:21 IST
ಅಕ್ಷರ ಗಾತ್ರ

ಮಂಡ್ಯ: ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿ ಯಲ್ಲಿ ನಡೆದಿದ್ದ ಬೈಕ್‌ ಕಳ್ಳತನ ಪ್ರಕರಣ ಭೇದಿಸಿರುವ ಮಂಡ್ಯ ಪೂರ್ವ ಠಾಣೆ ಪೊಲೀಸರು ನಾಲ್ವರು ಆರೋಪಿಗಳಿಂದ ₹7.25 ಲಕ್ಷ ಮೌಲ್ಯದ 26 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದ ಎಚ್‌.ಜಿ.ಶರತ್‌ (20), ಮಂಡ್ಯ ನಗರದ ಬೀಡಿ ಕಾರ್ಮಿಕರ ಕಾಲೊನಿಯ ಎಸ್‌.ಸಫಿವುಲ್ಲಾ (32), ರಿಯಾಜ್‌ ಅಲಿ (19) ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದ ಎಚ್‌.ಎಸ್‌.ಸಂತೋಷ್‌ (30) ಬಂಧಿತ ಆರೋಪಿಗಳು.

ಆರೋಪಿಗಳ ವಿರುದ್ಧ ಮೈಸೂರು ಜಿಲ್ಲೆ ತಿ.ನರಸೀಪುರ, ಬನ್ನೂರು, ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸ್‌ ಠಾಣೆಯಲ್ಲಿ ಬೈಕ್‌ ಕಳ್ಳತನದ 12 ಪ್ರಕರಣಗಳು ದಾಖಲಾಗಿದೆ.

ಘಟನೆ ವಿವರ: ಜ.11ರಂದು ಬೆಳಿಗ್ಗೆ 5ಗಂಟೆ ಸಮಯದಲ್ಲಿ ಮಂಡ್ಯ ನಗರದ ಸ್ವರ್ಣಸಂದ್ರದ ಪೆಟ್ರೊಲ್‌ ಬಂಕ್‌ ಬಳಿ ಬೆಂಗಳೂರು ರಸ್ತೆಯಿಂದ ಗುತ್ತಲು ರಸ್ತೆ ಕಡೆಗೆ ಬೈಕ್‌ನಲ್ಲಿ ಮೂವರು ಅನುಮಾನಾಸ್ಪದವಾಗಿ ರೀತಿಯಲ್ಲಿ ತಿರುಗಾಡುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀ ಸರಾದ ವಿ.ಗಿರೀಶ್‌, ಆನಂದ್‌ ಅವರನ್ನು ವಿಚಾರಿಸಿದಾಗ ಬೈಕ್‌ನ ದಾಖಲಾತಿ, ಸಮಂಜಸ ಉತ್ತರ ನೀಡದ ಕಾರಣ ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಮತ್ತೊಬ್ಬ ಭಾಗಿಯಾಗಿರುವ ವಿಷಯ ಗೊತ್ತಾಗಿದೆ.

ಮಂಡ್ಯ ಉಪವಿಭಾಗದ ಡಿವೈಎಸ್‌ಪಿ ಎಲ್‌.ನವೀನ್‌ಕುಮಾರ್‌, ಮಂಡ್ಯ ನಗರ ವೃತ್ತದ ಸಿಪಿಐ ಕೆ.ಸಂತೋಷ್‌ ಅವರ ನೇತೃತ್ವದಲ್ಲಿ ಪೂರ್ವ ಠಾಣಾ ಪಿಎಸ್‌ಐ ಎಚ್‌.ಪಿ.ಶರತ್‌, ಎಎಸ್‌ಐ ಲಿಂಗರಾಜು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT