‘ಮಂಡ್ಯ ತಾಲ್ಲೂಕಿನ ಮಹಾತ್ಮಗಾಂಧಿ ಬಡಾವಣೆ(ತೂಬಿನಕೆರೆ ತಿಟ್ಟು)ಯ ನಿವಾಸಿಯಾಗಿರುವ ಬಾಲಕನಿಂದ ಈ ಕೃತ್ಯ ನಡೆದಿದೆ. ಸ್ವರ್ಣಸಂದ್ರ ಸರ್ಕಾರಿ ಐಟಿಐ ಕಾಲೇಜಿನ ಫಿಟ್ಟರ್ ವಿಭಾಗದ ವಿದ್ಯಾರ್ಥಿಯಾಗಿದ್ದು, ರೌಡಿಸಂನಲ್ಲಿ ಹೆಸರು ಮಾಡಬೇಕೆಂದು ರಾಗಿಮುದ್ದನಹಳ್ಳಿ ಗ್ರಾಮದ ನಂದೀಶ್(19) ಎಂಬ ಯುವಕನ ವಾಗ್ವಾದಮಾಡಿ ಡ್ರ್ಯಾಗರ್ ಬೀಸಿದ್ದಾನೆ. ಜನ ಪ್ರಶ್ನಿಸಿದಾಗ ಓಡಿ ಹೋಗಿದ್ದಾನೆ’ ಎಂದು ನಂದೀಶ್ ಮಾಹಿತಿ ನೀಡಿದರು. ಸ್ಥಳೀಯರು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.