ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗೂರು | ಅಪಘಾತ: ಮೃತ ಯುವಕನ ಅಂಗಾಗ ದಾನ

Published 22 ಆಗಸ್ಟ್ 2023, 14:22 IST
Last Updated 22 ಆಗಸ್ಟ್ 2023, 14:22 IST
ಅಕ್ಷರ ಗಾತ್ರ

ಹಲಗೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ  ಹಲಗೂರು ಸಮೀಪದ ಕೊನ್ನಾಪುರ ಗ್ರಾಮದ ಸರಸ್ವತಿ ಮತ್ತು ನಾಗರಾಜು ದಂಪತಿ ಪುತ್ರ ಅಭಿಷೇಕ್ (28) ಅಂಗಾಂಗ ದಾನ ಮಾಡಲಾಗಿದೆ.

ಸಮೀಪದ ತೊರೆಕಾಡನಹಳ್ಳಿ ಬಳಿ ಆ. 17 ರಂದು ಬೈಕ್‌ನಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಮಂಗಳವಾರ ಬೆಳಿಗ್ಗೆ ನಿಧನರಾದರು.

ಅಂಗಾಂಗ ದಾನದಿಂದ ವ್ಯಕ್ತಿಯೊಬ್ಬರ ಜೀವನವನ್ನು ಬದಲಾಯಿಸಬಹುದಾಗಿದ್ದು, ಆ ನೋವಿನಲ್ಲಿ ಕುಟುಂಬದ ಸದಸ್ಯರ ಸಮ್ಮತಿ ಆಧರಿಸಿ ಪಿತ್ತಜನಕಾಂಗ, ಮೂತ್ರಪಿಂಡ, ಹೃದಯ ಕವಾಟ, ಕಣ್ಣಿನ ಕಾರ್ನಿಯಾವನ್ನು ದಾನ ಮಾಡಲು ಸಮ್ಮತಿಸಿ, ಮಾನವೀಯತೆ ಮೆರೆದಿದ್ದಾರೆ.

ಸ್ವಗ್ರಾಮ ಕೊನ್ನಾಪುರ ದಲ್ಲಿ ಮಂಗಳವಾರ ಸಂಜೆ ಮೃತ ಯುವಕನ ಅಂತ್ಯಕ್ರಿಯೆ ನಡೆಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT