ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಶನಿವಾರ ಆಡಿದ ‘ಆದಿಚುಂಚನಗಿರಿ ಮಠ ದಾರಿ ತಪ್ಪುತ್ತಿದೆ’ ಮಾತು ಬಿಸಿ ಚರ್ಚೆಗೆ ಗ್ರಾಸವಾಯಿತು.

ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಾಲ ಜಗತ್ ಶಾಲಾ ಕಟ್ಟಡ, ಮಹಾ ಗಣಪತಿ ದೇಗುಲ ಲೋಕಾರ್ಪಣೆ, ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಭದ್ರ ಬುನಾದಿ ಹಾಕಿದ್ದಾರೆ. ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವ ಪರಂಪರೆ ಮಠದ್ದು. ಮಠದ ಪೀಠಾಧಿಪತಿಗಳಾದ ಇಂದಿನ ಸ್ವಾಮೀಜಿಯ ನಡೆ– ನುಡಿಯಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಈ ಮಾತನ್ನು ನೋವಿನಿಂದ ಹೇಳುತ್ತಿದ್ದೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಈ ಮಾತಿಗೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘ಮಠ ಹಾದಿ ತಪ್ಪುತ್ತಿದೆ ಎಂಬ ಮಾತು ಒಪ್ಪುವಂತಹದ್ದಲ್ಲ. ನಮ್ಮ ಸ್ವಾಮೀಜಿಯ ವ್ಯಕ್ತಿತ್ವ ಇತರ ಸ್ವಾಮೀಜಿಗಳಿಗೆ ಮೇಲ್ಪಂಕ್ತಿಯಾಗಿದೆ. ಸ್ವಾಮೀಜಿಯವರಿಗೆ ನಿಮ್ಮ ಹಾದಿ ಸರಿಪಡಿಸಿಕೊಳ್ಳಿ ಎಂದು ಹೇಳುವ ಮಟ್ಟಿಗೆ ದೊಡ್ಡವರಾಗಿದ್ದೇವಾ? ಇಂಥ ಮಾತುಗಳು ತರವಲ್ಲ’ ಎಂದು ಪ್ರತಿಪಾದಿಸಿದರು.

ಆಶೀರ್ವಚನ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿ, ‘ಮಠ ದಾರಿ ತಪ್ಪದ ಹಾಗೆ ನಡೆಯುತ್ತಿದೆ, ಅನುಮಾನ ಬೇಡ’ ಎಂದರು.

‘ಯಾರು ಏನೇ ಹೇಳಿದರೂ ಮಠದ ಕೆಲಸ ಮಾದರಿಯಾದುದು’ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅವರು ಸ್ವಾಮೀಜಿ ಮಾತನ್ನು ಬೆಂಬಲಿಸಿದರು.

ಈ ಸನ್ನಿವೇಶಕ್ಕೆ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.