ಸಂತೇಬಾಚಹಳ್ಳಿ: ಹೋಬಳಿಯ ಅಘಲಯ ಗ್ರಾಮದಲ್ಲಿ ಹಳ್ಳಿಕಾರ್ ಪೋಷಕರು ಹಾಗೂ ಗ್ರಾಮಸ್ಥರು ಏರ್ಪಡಿಸಿದ್ದ 2ನೇ ವರ್ಷದ ಅಂತರ್ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಕಾಕಾ ಹಾಗೂ ಜಲ್ವಾ ಮೊದಲನೇ ಬಹುಮಾನವಾಗಿ ಒಂದು ದ್ವಿಚಕ್ರ ವಾಹನ ಹಾಗೂ ₹20 ಸಾವಿರ ನಗದು ಪಡೆದವು.

ದ್ವಿತೀಯ ಬಹುಮಾನವಾಗಿ ತೇಜ್ಯ ಹಾಗೂ ಅಡಿಕೆ ನಾಡು ಒಡೆಯ ದ್ವಿಚಕ್ರ ವಾಹನ ಹಾಗೂ ₹10 ಸಾವಿರ ನಗದು, ಮೂರನೇ ಬಹುಮಾನ ಸುಲ್ತಾನ್ ಒಂದು ದ್ವಿಚಕ್ರ ವಾಹನ ಮತ್ತು ಆಕರ್ಷಕ ಟ್ರೂಫಿ, ನಾಲ್ಕನೇ ಬಹುಮಾನ ರಾಕೇಟ್ಗೆ 30 ಸಾವಿರ ನಗದು, ಐದನೇ ಬಹುಮಾನ ಬೆಂಗಳೂರು ಕರ ತಂಡಗಳು ಪಡೆದವು.

ಸ್ಪರ್ಧೆಯಲ್ಲಿ ಚಿಕ್ಕಮಗಳೂರು, ಭದ್ರಾವತಿ, ಶಿವಮೊಗ್ಗ, ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳಿಂದ ಅಮೃತ್ ಮಹಲ್, ಹಳ್ಳಿಕಾರ್, ಗಿಡ್ಡಗಾಡು ಜಾತಿಯ ಸುಮಾರು 30ಕ್ಕೂ ಹೆಚ್ಚು ಜತೆ ಎತ್ತುಗಳು ಭಾಗವಹಿಸಿ ಗೆಲುವಿಗಾಗಿ ಸೆಣೆಸಾಡಿದವು.

ಜೋಡಿ ಎತ್ತುಗಳ ಬಂಡಿ ಓಡಿಸುವ ಸವಾರರು ಗೆಲುವಿಗಾಗಿ ಹರಸಾಹಸ ಪಟ್ಟರು. ಹೋಯ್, ಹೋಯ್ ಎಂದು ಕಿರುಚುತ್ತ, ಎತ್ತುಗಳ ಮೈ ತಟ್ಟುತ್ತ ಚುರುಕು ಮುಟ್ಟಿಸುತ್ತಿದ್ದರು. ನಾಗಾಲೋಟದಲ್ಲಿ ಓಡುತ್ತಿದ್ದ ಎತ್ತುಗಳು ಮರಗಳ ಸಹಾಯದಿಂದ ನಿರ್ಮಿಸಿದ್ದ ಮರದ ತಡೆಗೋಡೆಯನ್ನು ಮುರಿದು ಪ್ರೇಕ್ಷಕರ ಗ್ಯಾಲರಿಗೆ ನುಗ್ಗುತ್ತಿದ್ದವು. ಇನ್ನು ಕೆಲವು ಸ್ಪರ್ಧಿಗಳು ಎತ್ತುಗಳಿಗೆ ಕಟ್ಟಿರುವ ಹಗ್ಗದ ಸನ್ನೆಯ ಮೂಲಕವೇ ಗೆಲುವಿನ ದಡ ಸೇರುತ್ತಿದ್ದರು. ನೆರೆದ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆಗಳ ಮೂಲಕ ಹುರಿದುಂಬಿಸಿದರು.

ಆರ್ಟಿಒ ಮಲ್ಲಿಕಾರ್ಜುನ್ ಮಾತನಾಡಿ, ಗ್ರಾಮೀಣ ಕ್ರೀಡೆಯಲ್ಲಿ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯು ಉತ್ತಮ ಕ್ರೀಡೆ. ಹಳ್ಳಿಕಾರ್ ತಳಿಯು ರೈತರಿಗೆ ಉಳುಮೆ ಮಾಡಲು, ರೈತರ ಆರ್ಥಿಕ ಬೆಳವಣಿಗೆಗೆ ಈ ರಾಸುಗಳು ಪ್ರಮುಖವಾಗಿ ಪಾತ್ರ ವಹಿಸುತ್ತವೆ ಎಂದರು.

ಪಿ.ಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀಧರ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ವಿಜಯ ಕುಮಾರ್, ಹಿರೀಸವೆ ಹಳ್ಳಿಕಾರ್ ಸಂದೀಪ್, ಗ್ರಾ.ಪಂ. ಮಾಜಿ ಅಧ್ಯಕ್ಷ ಲೋಕೇಶ್, ತೀರ್ಪುಗಾರ ಹತ್ತಳ್ಳಿ ಮಾದೇವ,ರವಿ ಕುಮಾರ್, ನಾಟನಹಳ್ಳಿ ಪುನೀತ್, ಮಾಜಿ ಉಪಾಧ್ಯಕ್ಷ ಯೋಗೇಶ,ಕ್ರೀಡಾ ಆಯೋಜಕ ನಂದೀಶ್,ಧರ್ಮ, ಶಶಿ, ಸಚಿನ್, ಚಂದನ್,ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-40-1785305413

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.