ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ ಯಾತ್ರೆ: ಮಂಡ್ಯದ 40 ಮಂದಿ ಸುರಕ್ಷಿತ

Last Updated 9 ಜುಲೈ 2022, 15:31 IST
ಅಕ್ಷರ ಗಾತ್ರ

ಮಂಡ್ಯ: ನಗರದಿಂದ ಅಮರನಾಥ ಯಾತ್ರೆಗೆ ತೆರಳಿದ್ದ 40 ಮಂದಿ ಸುರಕ್ಷಿತವಾಗಿ ಶನಿವಾರ ಶ್ರೀನಗರಕ್ಕೆ ಮರಳಿದ್ದಾರೆ. ಅವರಲ್ಲಿ 16 ಮಂದಿ ದೇವರ ದರ್ಶನ ಪಡೆದಿದ್ದರೆ 24 ಮಂದಿ ದೇವರ ದರ್ಶನ ಪಡೆಯಲು ಸಾಧ್ಯವಾಗದೇ ವಾಪಸ್‌ ಬಂದಿದ್ದಾರೆ.

ಜುಲೈ 6ರಂದು ಅಮೃತಸರಕ್ಕೆ ತೆರಳಿ ಅಲ್ಲಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ್ದರು. ಗುಹೆಗೆ ತೆರಳಿ ದೇವರ ದರ್ಶನಕ್ಕೆ ಮೊದಲು 16 ಮಂದಿಗೆ ಅವಕಾಶ ಸಿಕ್ಕಿತ್ತು. ದೇವರ ದರ್ಶನ ಪಡೆದ ವಾಪಸ್‌ ಬರುವಾಗ ನಾಲ್ವರು ಭಾರಿ ಮಳೆಗೆ ಸಿಲುಕಿದ್ದರು. ಸೇನಾ ಕ್ಯಾಂಪ್‌ನಲ್ಲಿ ಅವರನ್ನು ರಕ್ಷಣೆ ಮಾಡಿ ಬೇಸ್‌ ಕ್ಯಾಂಪ್‌ಗೆ ಕಳುಹಿಸಲಾಗಿದೆ.

ಉಳಿದ 24 ಮಂದಿ ಬೇಸ್‌ ಕ್ಯಾಂಪ್‌ನಲ್ಲೇ ಇದ್ದರು, ಮೇಘಸ್ಫೋಟದ ನಂತರ ಗುಹೆಗೆ ತೆರಳಲು ಇವರಿಗೆ ಅವಕಾಶ ಸಿಕ್ಕಿಲ್ಲ. ಎಲ್ಲರೂ ಶನಿವಾರ ಶ್ರೀನಗರಕ್ಕೆ ವಾಪಸ್‌ ಬಂದ್ದು ಸೋಮವಾರ ನಗರಕ್ಕೆ ಮರಳಲಿದ್ದಾರೆ.

‘ಭಾರಿ ಮಳೆಯಿಂದಾಗಿ ಯಾತ್ರೆಗೆ ತೆರಳುವ ಮಾರ್ಗ ಭಯಾನಕವಾಗಿತ್ತು. ಎಲ್ಲರಿಗೂ ಜೀವ ಭಯ ಎದುರಾಗಿತ್ತು. ಸೇನೆಯು ನೂರಾರು ಜನರನ್ನು ರಕ್ಷಣೆ ಮಾಡಿದೆ’ ಎಂದು ಬೇಸ್‌ ಕ್ಯಾಂಪ್‌ನಿಂದ ವಾಪಸ್‌ ಬಂದ ಎಸ್‌.ಪಿ.ರೂಪಾ ತಿಳಿಸಿದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT