ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸೇಬು, ನುಗ್ಗೇಕಾಯಿ ದರ ಏರಿಕೆ

ಕೊತ್ತಂಬರಿ ಸೊಪ್ಪು ಒಂದು ಕಟ್ಟು ₹15, ಮಾರು ಮಲ್ಲಿಗೆ ಹೂವು ₹100ಕ್ಕೆ ಮಾರಾಟ
Last Updated 3 ಫೆಬ್ರುವರಿ 2021, 2:29 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ವಾರ ₹40 ಇದ್ದ ಬೀನ್ಸ್‌ ದರ ₹60ಕ್ಕೆ, ₹60 ಇದ್ದ ನುಗ್ಗೇಕಾಯಿ ಬೆಲೆ ₹120ಕ್ಕೆ ಹಾಗೂ ಸೇಬು ₹200ಕ್ಕೆ ಏರಿಕೆಯಾಗಿದೆ. ಏಲಕ್ಕಿ ಬಾಳೆ ಎರಡು ಕೆ.ಜಿ.ಗೆ ₹50ರಂತೆ ಮಾರಾಟವಾಗುತ್ತಿದೆ.

₹40 ಇದ್ದ ಬೀಟ್‌ರೂಟ್‌ ದರ ₹20, ₹40 ಇದ್ದ ಸುವರ್ಣಗೆಡ್ಡೆ ₹30, ₹50 ಇದ್ದ ಶುಂಠಿ ₹40, ಹೀರೇಕಾಯಿ ₹40, ಮೂಲಂಗಿ ₹20, ₹40 ಇದ್ದ ಹಸಿರು ಮೆಣಸಿನಕಾಯಿ ₹50, ಬದನೇಕಾಯಿ ₹30, ₹40 ಇದ್ದ ಕ್ಯಾರೆಟ್‌ ₹20, ₹40 ಇದ್ದ ಬೀನ್ಸ್‌ ₹60, ₹60 ಇದ್ದ ನುಗ್ಗೇಕಾಯಿ ₹120, ₹30 ಇದ್ದ ಗೆಡ್ಡೆಕೋಸು ₹20, ದಪ್ಪ ಮೆಣಸಿನಕಾಯಿ ₹40, ಭಜ್ಜಿಮೆಣಸಿನಕಾಯಿ ಬೆಲೆ ₹40 ಆಗಿದೆ.

ಎಲೆಕೋಸು ₹20, ಹೂಕೋಸು ಒಂದಕ್ಕೆ ₹30, ಬೂದುಗುಂಬಳಕಾಯಿ ₹20, ಹಾಗಲಕಾಯಿ ₹40, ಕುಂಬಳಕಾಯಿ ₹20, ₹30 ಇದ್ದ ಬೆಂಡೇಕಾಯಿ ದರ ₹40, ₹20 ಇದ್ದ ಮಂಗಳೂರು ಸೌತೆ ₹30, ಈರುಳ್ಳಿ ₹50, ಟೊಮೆಟೊ ₹20, ಬೆಳ್ಳುಳ್ಳಿ ₹80, ಆಲೂಗೆಡ್ಡೆ ₹30, ಸೀಮೇಬದನೆ ₹20, ಬಟಾಣಿ ₹50, ತೊಂಡೆಕಾಯಿ ₹40, ನಿಂಬೆಹಣ್ಣು ಒಂದಕ್ಕೆ ₹4, ಸೌತೇಕಾಯಿ ₹5 ರಂತೆ ಮಾರಾಟ ಮಾಡಲಾಗುತ್ತಿದೆ.

ಕೊತ್ತಂಬರಿ ಒಂದು ಕಟ್ಟು₹6 ರಿಂದ ₹15ಕ್ಕೆ ಏರಿಕೆಯಾಗಿದೆ. ಕಟ್ಟು ಕಿಲಕಿರೆ ₹10, ಪುದೀನಾ ₹5, ಸಬ್ಬಸಿಗೆ ₹15, ಮೆಂತೆ ₹10, ದಂಟು ₹7, ಕರಿಬೇವು ₹10, ಪಾಲಕ್‌ ₹5 ರಂತೆ ಬಿಕರಿಯಾಗುತ್ತಿದೆ.

ಸೇಬಿನ ಬೆಲೆ ಹೆಚ್ಚಳ: ₹120 ಇದ್ದ ಕೆ.ಜಿ. ಸೇಬು ₹200 ತಲು‍ಪಿದೆ. ಕಳೆದ ವಾರ ₹160 ಇದ್ದ ದ್ರಾಕ್ಷಿ ದರ ₹80ಕ್ಕೆ ಇಳಿದಿದೆ. ₹50 ಇದ್ದ ಸಪೋಟ ₹40, ಮೂಸಂಬಿ ₹80, ₹160 ಇದ್ದ ದಾಳಿಂಬೆ ಬೆಲೆ ₹250, ಅನಾನಸ್‌ ಒಂದಕ್ಕೆ ₹30, ಕಿತ್ತಳೆ ₹40, ಏಲಕ್ಕಿ ಬಾಳೆಹಣ್ಣು ₹30, ಪಚ್ಚಬಾಳೆ ₹20 ರಂತೆ ಬಿಕರಿಯಾಗುತ್ತಿದೆ.

ಕಳೆದ ವಾರ ₹80ಕ್ಕೆ ಮಾರಾಟವಾಗಿದ್ದ ಮಾರು ಮಲ್ಲಿಗೆ ₹100 ತಲುಪಿದೆ. ಕನಕಾಂಬರ ₹80, ಕಾಕಡ ₹30, ಕಣಗಲೆ ₹40, ಸೇವಂತಿ ₹40 ಆಗಿದೆ. ಕೆ.ಜಿ. ಮಲ್ಲಿಗೆ ₹820, ಕನಕಾಂಬರ ₹600, ಕಾಕಡ ₹210, ಕಣಗಲೆ ₹280, ಸೇವಂತಿ ₹120 ರಂತೆ ಮಾರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT