ಆಷಾಢ ಮಾಸ: ಹಣ್ಣು, ತರಕಾರಿ ಬೆಲೆ ಸ್ಥಿರ

7
ನಿಂಬೆಹಣ್ಣು, ಕೊತ್ತಂಬರಿಗೆ ಬೇಡಿಕೆ

ಆಷಾಢ ಮಾಸ: ಹಣ್ಣು, ತರಕಾರಿ ಬೆಲೆ ಸ್ಥಿರ

Published:
Updated:
Deccan Herald

ಮಂಡ್ಯ: ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ಕಡಿಮೆಯಾಗಿರುವ ಕಾರಣ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿವೆ.

ಜುಲೈ ತಿಂಗಳಲ್ಲಿ ನಡೆದ ಲಾರಿ ಮುಷ್ಕರದಿಂದಾಗಿ ತರಕಾರಿ ಪೂರೈಕೆಯಲ್ಲಿ ಕೊಂಚ ವ್ಯತ್ಯಾಸ ಉಂಟಾಗಿತ್ತು. ಸ್ಥಳೀಯವಾಗಿ ಬೆಳೆಯುವ ತರಕಾರಿ ಮಾತ್ರ ಮಾರುಕಟ್ಟೆಗೆ ಪೂರೈಕೆಯಾಗಿತ್ತು. ಆಷಾಢದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವಹಿವಾಟು ತಗ್ಗಿದೆ. ಆದರೂ ಹಳ್ಳಿಗಳಲ್ಲಿ ಗ್ರಾಮದೇವತೆ ಹಾಗೂ ಅಮ್ಮನ ಹಬ್ಬದ ಆಚರಣೆ ನಡೆಯುತ್ತಿದ್ದು ಮಾಂಸಾಹಾರಕ್ಕೆ ಅವಶ್ಯವಾಗಿರುವ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ನಿಂಬೆಹಣ್ಣು ಹೆಚ್ಚಾಗಿ ಮಾರಾಟವಾಗುತ್ತಿವೆ.

ಏರಿಕೆ ಕಂಡಿದ್ದ ಹಸಿ ಮೆಣಸಿನ ಕಾಯಿ ಬೆಲೆ ಎರಡು ವಾರಗಳಿಂದ ನಿಯಂತ್ರಣಕ್ಕೆ ಬಂದಿದ್ದು ಈ ವಾರ ಕೆ.ಜಿ ₹ 40ಕ್ಕೆ ಮಾರಾಟವಾಗುತ್ತಿದೆ. ಡೊಣ ಮೆಣಸಿನಕಾಯಿ ಹಾಗೂ ಭಜಿ ಮೆಣಸಿನಕಾಯಿ ಕಳೆದ ವಾರ ₹ 80ಕ್ಕೆ ಮಾರಾಟವಾಗುತ್ತಿತ್ತು ಈ ವಾರ ₹ 60ಕ್ಕಿಳಿದಿದೆ. ಇನ್ನು ತರಕಾರಿಗಳಲ್ಲಿ ಮೂಲಂಗಿ, ಟೊಮೆಟೊ ಹಾಗೂ ಎಲೆಕೋಸು ₹ 10 ಕ್ಕೆ ಕೆ.ಜಿ ಮಾರಾಟವಾಗುತ್ತಿವೆ. ಸಾಂಬಾರ್‌ ಸೌತೆ, ಸೋರೆಕಾಯಿ, ಈರುಳ್ಳಿ, ಬೆಂಡೆಕಾಯಿ, ತೊಂಡೆಕಾಯಿ, ಅವರೆ ಕಾಯಿ, ಪಡವಲಕಾಯಿ ₹ 20, ಹೂಕೋಸು, ಹೀರೆಕಾಯಿ, ಆಲೂಗಡ್ಡೆ, ಬದನೆಕಾಯಿ, ಸೀಮೆ ಬದನೆ, ಸೌತೆಕಾಯಿ, ಚವಳಿಕಾಯಿ, ಗೆಡ್ಡೆಕೋಸು, ನುಗ್ಗೆಕಾಯಿ, ಬೀಟ್‌ರೂಟ್ ₹ 30, ಕ್ಯಾರೆಟ್, ಬೀನ್ಸ್, ಸುವರ್ಣಗೆಡ್ಡೆ ₹ 40ಕ್ಕೆ ಕೆ.ಜಿ ಮಾರಾಟವಾಗುತ್ತಿವೆ.

₹ 2ಕ್ಕೆ ಒಂದು ನಿಂಬೆಹಣ್ಣು ಮಾರಾಟವಾಗುತ್ತಿದೆ. ಫಾರಂ ಬೆಳ್ಳುಳ್ಳಿ ₹ 20, ನಾಟಿ ಬೆಳ್ಳುಳ್ಳಿ ₹ 70ಕ್ಕೆ ಕೆ.ಜಿ ಮಾರಾಟವಾಗುತ್ತಿದೆ. ತೆಂಗಿನಕಾಯಿ ಕನಿಷ್ಠ ₹ 15– ಗರಿಷ್ಠ ₹ 25ರವರೆಗೆ ಮಾರಾಟವಾಗುತ್ತಿವೆ.

ನಾಟಿ ಕೊತ್ತಂಬರಿ ಸೊಪ್ಪು ಒಂದು ಕಟ್ಟು ₹ 10, ಫಾರಂ ಕೊತ್ತಂಬರಿ ₹ 5, ಪಾಲಕ್‌ ₹ 5, ಮೆಂತೆ ₹ 5, ಪುದೀನಾ ₹ 5, ಕರಿಬೇವು ₹ 5, ಸಬ್ಬಸಿಗೆ ₹ 5, ಕಿಲ್‌ಕೀರೆ, ಕೀರೆ, ದಂಟಿನ ಸೊಪ್ಪು ಒಂದು ಕಟ್ಟು ₹ 3ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿವೆ. ಕಳೆದ ವಾರ ₹ 200ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ಸೇಬು, ಈ ವಾರ ₹ 160ಕ್ಕೆ ಮಾರಾಟವಾಗುತ್ತಿದೆ. ದ್ರಾಕ್ಷಿ ₹ 100, ಕಿತ್ತಳೆ ₹ 80, ಮೋಸಂಬಿ ₹ 80, ದಾಳಿಂಬೆ ₹ 60, ಪಪ್ಪಾಯ ₹ 30, ಖರಬೂಜ ₹ 20, ಅನಾನಸ್ ₹ 20, ಕಲ್ಲಂಗಡಿ ₹ 15ಕ್ಕೆ ಕೆ.ಜಿ ಮಾರಾಟವಾಗುತ್ತಿವೆ. ಏಲಕ್ಕಿ ಬಾಳೆ ₹ 50 ಹಾಗೂ ಪಚ್ಚಬಾಳೆ ₹ 30ಕ್ಕೆ ಕೆಜಿ ಮಾರಾಟವಾಗುತ್ತಿವೆ.

ಹೂವಿನ ಬೆಲೆ ಸ್ಥಿರ: ಮಲ್ಲಿಗೆ, ಕಾಕಡ, ಕನಕಾಂಬರ, ಸೇವಂತಿಗೆ ₹ 30ಕ್ಕೆ ಮಾರು ಮಾರಾಟವಾಗುತ್ತಿವೆ. ಮರಳೆ ಹೂವು ₹ 40ಕ್ಕೆ ಮಾರು ಸಿಗುತ್ತಿದೆ. ಸುಗಂಧರಾಜ ಹೂವಿನ ಹಾರ ₹ 40ರಿಂದ ₹ 100ರವರೆಗೆ ದೊರೆಯುತ್ತಿದೆ. ಗುಲಾಬಿ ಹಾರ ₹ 250, ದೊಡ್ಡ ಹಾರ ₹ 500ಕ್ಕೆ ಮಾರಾಟವಾಗುತ್ತಿವೆ. ಮಲ್ಲಿಗೆ ಬಿಡಿ ಹೂವು ₹ 250ಕ್ಕೆ ಕೆ.ಜಿ, ಬಿಡಿ ಸೇವಂತಿಗೆ ₹ 150ಕ್ಕೆ ಕೆ.ಜಿ ಮಾರಾಟವಾಗುತ್ತಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !