ಮಂಡ್ಯ: ‘ದಲಿತರ ಮೇಲೆ ಹಿಂದುತ್ವ, ಮನುವಾದಿ ಹಾಗೂ ಕೋಮುವಾದಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಅದನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಬೇಕಿದೆ’ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ(ಕರ್ನಾಟಕ)ದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಜಾತಿ ಅಸ್ಪೃಶ್ಯತೆ ನಿವಾರಣೆ ಮತ್ತು ಏಕತೆಗಾಗಿ ದಲಿತರ, ಸಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಕುರಿತು ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಉಪಯೋಜನೆ ಪರಿಣಾಮವಾಗಿ ಜಾರಿ ಮಾಡಲು ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಭೂ ಒಡೆತನ ಯೋಜನೆಯಡಿ ಭೂಸ್ವಾಧಿನ ಮಾಡಿ ದಲಿತರಿಗೆ ಭೂಮಿ ಕೊಡಬೇಕು. ಗ್ಯಾರಂಟಿ ಯೋಜನೆಯ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಗೆ ₹42,018 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತಿದೆ, ಆದರೆ ದಲಿತರಿಗೆ ಹಣ ಹಂಚುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಜಮೀನು ಇಲ್ಲದ ದಲಿತರಿಗೆ 2018ರಿಂದ ಇಲ್ಲಿವರೆಗೂ ಒಂದು ಎಕರೆ ಜಮೀನು ಕೊಡುವುದಕ್ಕೆ ಆಗಿಲ್ಲ. ದಲಿತರಿಗೆ ಕೊಡಲು ಜಮೀನಿಲ್ಲ ಎಂದು ಸರ್ಕಾರದವರು ಹೇಳುತ್ತಾರೆ. ಆದರೆ ಕೈಗಾರಿಕೆಗಳು, ಬಂಡವಾಳಶಾಹಿಗಳು ಹಾಗೂ ಮಠಗಳಿಗೆ ಭೂಸ್ವಾಧೀನ ಮಾಡಿ ಕೊಡುವಂತೆ ದಲಿತರಿಗೂ ಜಮೀನು ನೀಡಲಿ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಹೋರಾಟದ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಒಳಮೀಸಲಾತಿಗಾಗಿ ನಾಗಮೋಹನ ದಾಸ್ ಆಯೋಗವು ಮಧ್ಯಂತರ ವರದಿಯನ್ನು ನೀಡಿದ್ದು, ಈ ಸಮೀಕ್ಷೆ ಪಾರದರ್ಶಕವಾಗಿ ನಡೆಯಬೇಕಾದರೆ ಸ್ಥಳೀಯ ಶಿಕ್ಷಕರು ಕೆಲಸ ಮಾಡುವಂತಾಗಬೇಕು. ಕಂಪ್ಯೂಟರ್ನಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿರುವುದರಿಂದ ‘ಸರ್ವರ್’ ಸಮಸ್ಯೆ ಗಂಭೀರವಾಗಿದೆ. ಇದನ್ನು ಸರ್ಕಾರ ಮತ್ತು ಆಯೋಗ ಗಮನಿಸಿ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಮಾರೋಪ ಸಮಾರಂಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ‘ಈಗಿರುವ ಸವಾಲುಗಳನ್ನು ಆಮೂಲಾಗ್ರವಾಗಿ ಬದಲಾಯಿಸಲು ಬೇಕಿರುವಂತಹ ಕಾರ್ಯವ್ಯೂಹವಾಗಲಿ, ಚಟುವಟಿಕೆಯಾಗಲಿ ದಲಿತ ಸಂಘಟನೆಗಳಲ್ಲಿ ಕಾಣುತ್ತಿಲ್ಲ. ಅನೇಕ ದಲಿತ ಚಳವಳಿಗಳು ದಲಿತರ ಸಮಸ್ಯೆಯನ್ನು ಕೇವಲ ದಲಿತರ ಸಮಸ್ಯೆ ಎಂದು ನೋಡಲಾಗುತ್ತಿರುವುದೇ ಕಾರಣವಾಗಿದೆ’ ಎಂದು ವಿಷಾದಿಸಿದರು.

ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ, ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೃಷ್ಣ, ಉಪಾಧ್ಯಕ್ಷ ಎಚ್.ಜಿ. ನಾಗಣ್ಣ, ಕಾರ್ಯದರ್ಶಿ ಅಂಬೂಜಿ, ಸಹ ಕಾರ್ಯದರ್ಶಿಗಳಾದ ಎನ್. ನಾಗರಾಜು, ಪೃಥ್ವಿ ಭಾಗವಹಿಸಿದ್ದರು.

ದಲಿತರ ಹಕ್ಕುಗಳ ಬಗ್ಗೆ ಸಂಘಟಿತ ಕೆಲಸ ಅಗತ್ಯ ಪರಿಶಿಷ್ಟರಿಗೆ ಹಣ ಹಂಚುವಲ್ಲಿ ಸರ್ಕಾರ ವಿಫಲ ಭೂಸ್ವಾಧೀನ ಮಾಡಿಕೊಂಡು ಜಮೀನು ನೀಡಲಿ

ದಲಿತರ ಭೂಮಿಯ ಮತ್ತು ಉದ್ಯೋಗ ಪ್ರಶ್ನೆಯನ್ನು ನಿವಾರಿಸದೇ ಹೊರತು ಯಾವುದೇ ಕಾರಣಕ್ಕೂ ದಲಿತರಿಗೆ ಸಮಾನತೆ ಸಿಗುವುದಿಲ್ಲ

-ಟಿ.ಎಲ್. ಕೃಷ್ಣೇಗೌಡ ಸಿಪಿಐಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.