ಕುಕ್ಕರ್ ವಿಷಲ್ ನುಂಗಿ ಮಗು ಸಾವು

7

ಕುಕ್ಕರ್ ವಿಷಲ್ ನುಂಗಿ ಮಗು ಸಾವು

Published:
Updated:
ಭುವನ್‌ಗೌಡ

ಮದ್ದೂರು: ತಾಲ್ಲೂಕಿನ ನಗರಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಕುಕ್ಕರ್‌ ವಿಷಲ್‌ ನುಂಗಿ ಒಂದು ವರ್ಷದ ಮಗು ಮೃತಪಟ್ಟಿದೆ.

ನಗರಕೆರೆ ಗ್ರಾಮದ ಮರಿ ನಿಂಗೇಗೌಡ ಮತ್ತು ರೂಪಾ ದಂಪತಿ ಪುತ್ರ ಭುವನ್‌ಗೌಡ ಮೃತಪಟ್ಟ ಮಗು. ಮನೆಯಲ್ಲಿ ಆಟವಾಡುತ್ತಿದ್ದ ಮಗು ಅಡುಗೆ ಮನೆಯಲ್ಲಿದ್ದ ಕುಕ್ಕರ್ ವಿಷಲ್ ಗುಂಡಿಯನ್ನು ಬಾಯೊಳಗಿಟ್ಟುಕೊಂಡು ನುಂಗಿದೆ.‌ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದ ಗುಂಡಿಯನ್ನು ಉಗುಳಲು ಸಾಧ್ಯವಾಗದೇ ಮಗು ಚೀರಾಡುತ್ತಿತ್ತು.

ಪೋಷಕರು ಮಗುವನ್ನು ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಸೇರಿಸಿದರು. ನಂತರ ಮಂಡ್ಯದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಮಗು ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !