ಹೆಮ್ಮನಹಳ್ಳಿ: ನವಜಾತ ಶಿಶು ಪತ್ತೆ

ಶುಕ್ರವಾರ, ಏಪ್ರಿಲ್ 19, 2019
31 °C

ಹೆಮ್ಮನಹಳ್ಳಿ: ನವಜಾತ ಶಿಶು ಪತ್ತೆ

Published:
Updated:
Prajavani

ಮದ್ದೂರು: ತಾಲ್ಲೂಕಿನ ಹೆಮ್ಮನಹಳ್ಳಿ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ನವಜಾತ ಶಿಶು ಪತ್ತೆಯಾಗಿದೆ.

ಮುಂಜಾನೆ 4 ಗಂಟೆಗೆ ಹುಟ್ಟಿರುವ ಹೆಣ್ಣು ಮಗುವನ್ನು ಬಟ್ಟೆ ಬ್ಯಾಗ್‌ನಲ್ಲಿ ಹಾಕಿ ಇಟ್ಟು ಹೋಗಿದ್ದಾರೆ. ಮಗುವಿನ ಚೀರಾಟ ಕಂಡ ಸ್ಥಳೀಯರು ಶಿಶುವನ್ನು ಸೋಮನಹಳ್ಳಿಯ ವಿಮಲಾ ಎಂಬುವರಿಗೆ ನೀಡಿದ್ದು, ಅವರು ಮಗುವಿಗೆ ಆರೈಕೆ ಮಾಡಿದ್ದಾರೆ.

ಸಿಡಿಪಿಒ ಚೇತನ್ ಕುಮಾರ್ ಹಾಗೂ ದತ್ತು ಸ್ವೀಕಾರ ಕೇಂದ್ರದವರು ವಿಮಲಾ ಅವರ ಮನೆಗೆ ಭೇಟಿ ನೀಡಿ ಮಗುವನ್ನು ವಶಕ್ಕೆ ತೆಗೆದುಕೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ, ಮಗುವನ್ನು ಮಂಡ್ಯದ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಮಲಾ ಎಂಬ ಮಹಿಳೆ ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !