ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಬಿಬೆಟ್ಟ: ದನಗಳ ಜಾತ್ರೆಗೆ ಚಾಲನೆ

ಸಮಾಜದಲ್ಲಿ ಕ್ಷೀಣಿಸುತ್ತಿರುವ ಸೌಹಾರ್ದ ಗುಣ: ಬೇಸರ
Last Updated 2 ಮಾರ್ಚ್ 2022, 3:42 IST
ಅಕ್ಷರ ಗಾತ್ರ

ಪಾಂಡವಪುರ: ತಾಲ್ಲೂಕಿನ ಬೇಬಿ ಬೆಟ್ಟದ ದನಗಳ ಜಾತ್ರಾ ಮಹೋತ್ಸವಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಮಂಗಳವಾರ ಚಾಲನೆ ನೀಡಿದರು.

ಬೇಬಿ ಗ್ರಾಮದ ದುರ್ದುಂಡೇಶ್ವರ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

‘ಬೇಬಿಬೆಟ್ಟದಲ್ಲಿ ಬೃಹತ್ ಶಿವಲಿಂಗ ವಿಗ್ರಹ ಸ್ಥಾಪನೆ ಹಾಗೂ ಜಾತ್ರಾ ಮೈದಾನದಲ್ಲಿರುವ ಮಹದೇಶ್ವರ ದೇವಾಲಯವನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು. ಈ ವರ್ಷ ಉತ್ತಮ ರಾಸುಗಳಿಗೆ 54 ಚಿನ್ನದ ಪದಕ ಗಳನ್ನು ನೀಡಲು ತೀರ್ಮಾನಿಸಲಾಗಿದೆ’ ಎಂದು ಪುಟ್ಟರಾಜು ತಿಳಿಸಿದರು.

ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಮಾತನಾಡಿ, ‘ಜಾತ್ರೆಗಳು ಮನುಷ್ಯರಲ್ಲಿ ಸೌಹಾರ್ದವನ್ನು ಮೂಡಿಸುತ್ತವೆ. ಆದರೆ, ಮನುಷ್ಯರಲ್ಲಿ ಸೌಹಾರ್ದ ಗುಣ ಕ್ಷೀಣಿಸುತ್ತಿದೆ. ಸೌಹಾರ್ದ ಇದ್ದಾಗ ಮಾತ್ರ ಮೌಲ್ಯಗಳು ಉಳಿಯುತ್ತವೆ’ ಎಂದರು.

‘ದಕ್ಷಿಣ ಕರ್ನಾಟಕದಲ್ಲಿ ಭಕ್ತರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನೀಡುತ್ತಿರಲಿಲ್ಲ. ಆದರೆ, ನಮ್ಮ ಮಠದ ಚಂದ್ರವನ ಆಶ್ರಮದಲ್ಲಿನ ಕಾಶಿವಿಶ್ವನಾಥಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ದಿನದಂದು ಭಕ್ತರಿಗೆ ಗರ್ಭಗುಡಿಗೆ ಪ್ರವೇಶ ನೀಡಿ, ಪೂಜೆ ಸಲ್ಲಿಸಲು ಅವಕಾಶ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

ರಾಸುಗಳ ಆಗಮನ: ದನಗಳ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ರಾಸುಗಳು ಬಂದಿವೆ. ಜನ, ಜಾನುವಾರುಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಜಾತ್ರಾ ಮೈದಾನದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ರೈತರಿಗೆ ಮಾಹಿತಿ ನೀಡಲು ವಸ್ತುಪ್ರದರ್ಶನ ಏರ್ಪಡಿಸಿವೆ.

ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಅಶೋಕ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್, ಹೊನಗಾನಹಳ್ಳಿ ಭವಾನಿ, ವರದರಾಜು, ಚಿನಕುರಳಿ ಗ್ರಾ.ಪಂ ಸದಸ್ಯ ಪಾಷಾ, ನಾರಾಯಣಪುರ ಗ್ರಾ.ಪಂ ಉಪಾಧ್ಯಕ್ಷೆ ಮಂಗಳ, ಆರ್‌ಟಿಒ ಅಧಿಕಾರಿ ಷಣ್ಮುಖ, ತಾ.ಪಂ ಮಾಜಿ ಸದಸ್ಯರಾದ ಸಿ.ಎನ್.ಗೋಪಾಲಗೌಡ, ವಿ.ಎಸ್.ನಿಂಗೇಗೌಡ, ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್, ತಾ.ಪಂ ಇಒ ಆರ್.ಪಿ.ಮಹೇಶ್, ಟಿಎಚ್ಒ ಡಾ.ಸಿ.ಎ.ಅರವಿಂದ್, ಬಿಇಒ ಲೋಕೇಶ್, ಜಾತ್ರಾ ಸಮಿತಿ ಅಧ್ಯಕ್ಷ ಶಿಂಡಭೋಗನಹಳ್ಳಿ ನಾಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT